ಕ್ರೈಂದಕ್ಷಿಣ ಕನ್ನಡದೇಶ-ವಿದೇಶವೈರಲ್ ನ್ಯೂಸ್

ಸಂಬಂಧಿಕರ ಮನೆಯಲ್ಲಿ ಸ್ನಾನಕ್ಕೆಂದು ಹೋಗಿದ್ದ ಮಹಿಳೆ ಬಾತ್ ​ರೂಮ್ ​ನಲ್ಲಿ ಸಾವು..! ನಿಗೂಢ ಸಾವಿನ ರಹಸ್ಯವೇನು..?

153

ನ್ಯೂಸ್ ನಾಟೌಟ್: ಸ್ನಾನಕ್ಕೆ ಹೋಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮತ್ತು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಡೇಪೇಟೆಯಲ್ಲಿ ನಡೆದಿದೆ.

ಲಕ್ಷ್ಮೀ (25) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಆಂಧ್ರದ ತಿರುಪತಿಯಿಂದ ಅಡೇಪೇಟೆಯಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ಬಂದಿದ್ದ ಲಕ್ಷ್ಮೀ, ಇಂದು (ನವೆಂಬರ್ 25) ಸ್ನಾನಕ್ಕೆಂದು ಹೋಗಿದ್ದ ವೇಳೆ ಬಾತ್ ​ರೂಮ್ ​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಆಂಧ್ರಪ್ರದೇಶದ ತಿರುಪತಿ ಮೂಲದ ಲಕ್ಷ್ಮೀ ತನ್ನ ಪತಿಯೊಂದಿಗೆ ಮಲ್ಲೇಶ್ವರಂನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಅಡೇಪೇಟೆಯಲ್ಲಿರುವ ಸಂಬಂಧಿ ಸುಹಾಸಿನಿ ಎಂಬುವವರ ಮನೆಗೆ ಪತಿ ಜೊತೆ ಹೋಗಿದ್ದು, ಬೆಳಗ್ಗೆ ಸ್ನಾನ್ಕಕೆಂದು ಹೋದಾಗ ಬಾತ್​ರೂಮ್​ನಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಮನೆಯಲ್ಲಿಯೇ ಎಲ್ಲರೂ ಇದ್ದರು. ಸ್ನಾನಕ್ಕೆ ಹೋಗುವ ಮುನ್ನ ಲಕ್ಷ್ಮೀ ಮುಖದ ಮೇಲೆ ಏನೂ ಆಗಿರಲಿಲ್ಲ. ಯಾವುದೇ ಗಾಯದ ಗುರುತುಗಳೂ ಇರಲಿಲ್ಲ. ಆದ್ರೆ, ಸ್ನಾನಕ್ಕೆ ಹೋದ ಕೆಲವೇ ನಿಮಿಷಗಳಲ್ಲಿ ಸಾವನ್ಪಪಿದ್ದು, ಮುಖದಲ್ಲಿ ಪರಚಿರುವ ಗಾಯಗಳಾಗಿರುವುದು ಕಂಡುಬಂದಿದೆ. ಆದರೂ ಮಹಿಳೆ ಸ್ನಾನಗೃಹದಲ್ಲಿ ಬೆತ್ತಲೆಯಾಗಿ ಬಿದ್ದಿರುವುದು ಕಂಡುಬಂದಿದೆ. ನೆಲಮಂಗಲ ಟೌನ್‌ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿ ಬಳಿಕ ಎಲ್ಲಾ ಗೊತ್ತಾಗಲಿದೆ.

Click

https://newsnotout.com/2024/11/ipl-kannada-news-rishab-panth-kannada-news-viral-issue-ipl-bidding/
https://newsnotout.com/2024/11/kannada-news-business-man-and-live-in-relationship-issue/
https://newsnotout.com/2024/11/mysore-chamundeshwari-gold-ratha-kannada-news/
https://newsnotout.com/2024/11/kollur-kantara-kannada-news-mini-bus-viral-news-kdd/
https://newsnotout.com/2024/11/swiggi-kannada-news-office-viral-news-viral-post-office/
https://newsnotout.com/2024/11/google-map-kannada-news-marriage-map-kannada-news-marriage/
See also  ಬದುಕಿದ್ದಾಗಲೇ ಮಗಳಿಗೆ ಪಿಂಡ ಪ್ರದಾನ ಮಾಡಿದ ಪೋಷಕರು! ಯುವತಿಯ ನಿರ್ಧಾರಕ್ಕೆ ಆಕ್ರೋಶಗೊಂಡ ಕುಟುಂಬ ಸಂತಾಪ ಕಾರ್ಡ್‌ ಮುದ್ರಿಸಿ ವಿತರಿಸಿದ್ದೇಕೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget