ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಒಂಟಿತನ ಅನ್ನೋದು ಸಾಮಾನ್ಯವಾಗಿ ಬಿಟ್ಟಿದೆ. ಎಲ್ಲರೂ ಜೊತೆಗಿದ್ದರೂ ತನಗೆ ಯಾರು ಇಲ್ಲ ಎಂಬ ಭಾವನೆ ಹೆಚ್ಚಿನವರನ್ನು ಕಾಡಲು ಶುರುವಾಗಿದೆ. ಹೀಗಿರುವಾಗ ಏನಾದರೂ ಕೆಲಸದಲ್ಲಿ ತೊಡಗಿಕೊಂಡಾಗ ತಕ್ಕ ಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು. ಇದೀಗ ಇಲ್ಲೊಂದು ಪೋಸ್ಟ್ ವೊಂದು ಭಾರಿ ವೈರಲ್ ಆಗಲು ಶುರುವಾಗಿದೆ.
ವಾಕಿಂಗ್ ಹೋಗೋಕೆ ಚೆಂದದ ಹುಡುಗಿ ಬೇಕು ಎಂಬ ಜಾಹೀರಾತೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದರ ಸತ್ಯಾಸತ್ಯತ ಬಗ್ಗೆ ಖಚಿತತೆ ಇಲ್ಲ. ಆದರೆ ನೆಟ್ಟಿಗರು ಈ ಫೋಸ್ಟ್ ಗೆ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ. ಹಾಗಿದ್ರೆ ಈ ಜಾಹೀರಾತಿನಲ್ಲಿ ಅಂಥದ್ದೇನಿದೆ ನೋಡೋಣ ಬನ್ನಿ.
ಜಾಹೀರಾತಿನಲ್ಲೇನಿದೆ?
ಮುಂಜಾನೆ ವಾಯುವಿಹಾರಕ್ಕೆ ಹೋಗಲು ಸುಂದರವಾದ ಹುಡುಗಿ ಬೇಕು. ಬಿಹೆಚ್ ಯು ಸಮೀಪ, ಕೇವಲ ಒಂದು ಗಂಟೆ, ಸ್ಯಾಲರಿ 6 ರಿಂದ 10 ಸಾವಿರ ರೂಪಾಯಿ ಎಂದು ಬರೆದು ದೂರವಾಣಿ ಸಂಖ್ಯೆಯನ್ನು ಹಾಕಲಾಗಿದೆ. kalyug gram ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ಜಾಹೀರಾತಿನ ಫೋಟೋ ಪೋಸ್ಟ್ ಮಾಡಲಾಗಿದ್ದು, ‘ಇತನ ಅಕೆಲಾ ಬಂದ ಆಜ್ ತಕ್ ನಹೀ ದೇಖ’ ಎಂದು ಬರೆದಿದ್ದಾರೆ. ಅಂದರೆ ನಾನು ಇಷ್ಟೊಂದು ಒಂಟಿತನ ಅನುಭವಿಸುತ್ತಿರುವ ವ್ಯಕ್ತಿಯನ್ನು ಯಾವತ್ತೂ ನೋಡಿಲ್ಲ ಎಂದು ಅವರು ಬರೆದಿದ್ದಾರೆ.
View this post on Instagram
ನೆಟ್ಟಿಗರ ಕಾಮೆಂಟ್ ಹೇಗಿದೆ ನೋಡಿ!
ಇನ್ನೂ ಈ ಪೋಸ್ಟ್ ನೋಡಿದ ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಮಹಿಳೆ ನಾನು ನನ್ನ ಗಂಡ ಹಾಗೂ ಮಗನನ್ನು ಕರೆದುಕೊಂಡು ಬರಬಹುದೇ? ವಾಕ್ ಗೆ ಜಾಸ್ತಿ ಜನ ಬಂದಂತಾಗುತ್ತದೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಒಂಟಿತನ ತುಂಬಾ ಭಯಾನಕವಾಗಿರುತ್ತದೆ. ಕೆಲವೊಮ್ಮೆ ಜೊತೆಗೆ ನಡೆಯಲು ನಿಮಗೆ ಯಾರಾದರೂ ಜೊತೆಗಾರ ಬೇಕು ಎನಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಇಲ್ಲಿ ಕೂಡ ವರ್ಣಬೇಧ ಕಾಣುತ್ತಿದೆ. ವಾಕ್ ಹೋಗುವುದಕ್ಕೂ ಇವರಿಗೆ ಸುಂದರ ಹುಡುಗಿ ಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಅನೇಕರು ಒಂಟಿತನದ ಬಗ್ಗೆ ಮಾತನಾಡಿದ್ದು, ಒಂಟಿತನ ತುಂಬಾ ನೋವಿನಿಂದ ಕೂಡಿರುತ್ತದೆ. ಈ ಸ್ಥಿತಿಯನ್ನು ನಾನು ಪ್ರತಿದಿನವೂ ಎದುರಿಸುತ್ತಿದ್ದೇನೆ ಎಂದು ಒಬ್ಬರು ಮಹಿಳೆ ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತೊಬ್ಬರು ನಾನು ಸಿದ್ಧಳಿದ್ದೇನೆ ಸ್ಯಾಲರಿ ಏನು ಬೇಕಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.