Latestಕ್ರೈಂವೈರಲ್ ನ್ಯೂಸ್ಸಿನಿಮಾ

ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ವಿನಯ್ ಮತ್ತು ರಜತ್ 3 ದಿನ ಪೊಲೀಸ್ ಕಸ್ಟಡಿಗೆ..! ಪಬ್ಲಿಕ್​ ಪ್ರಾಸಿಕ್ಯೂಟರ್ ಹೇಳಿದ್ದೇನು..?

623

ನ್ಯೂಸ್‌ ನಾಟೌಟ್: ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ ತಪ್ಪಿಗಾಗಿ ಬಿಗ್ ಬಾಸ್ ಖ್ಯಾತಿಯ ರಜತ್ ಹಾಗೂ ವಿನಯ್ ಗೌಡಗೆ ಕಾನೂನು ಸಂಕಷ್ಟ ಹೆಚ್ಚಾಗಿದೆ. ರಿಯಲ್ ಮಚ್ಚು ಹಿಡಿದು ರೀಲ್ಸ್ ಮಾಡಿದ ಆರೋಪ ಅವರ ಮೇಲಿದೆ.
ಆದರೆ ಆ ಮಚ್ಚು ಎಲ್ಲಿದೆ ಎಂಬುದನ್ನು ಅವರಿಬ್ಬರು ಇನ್ನೂ ಪೊಲೀಸರಿಗೆ ತಿಳಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಪಬ್ಲಿಕ್​ ಪ್ರಾಸಿಕ್ಯೂಟರ್ ಹರೀಶ್‌ ಚಂದ್ರಗೌಡ ವಾದ ಮಾಡಿದ್ದರು.

ಬೆಂಗಳೂರಿನ 24ನೇ ಎಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ವಿನಯ್ ಗೌಡ ಮತ್ತು ರಜತ್ ಕಿಶನ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.

‘ರಾತ್ರಿ ತಂದು ಫೈಬರ್ ಲಾಂಗ್ ನೀಡಿದಾಗ ನೋಟಿಸ್ ನೀಡಿ ಕಳಿಸಿದ್ದೆವು. ಬೆಳಗ್ಗೆ ಇವರು ಹಾಜರುಪಡಿಸಿದ್ದು ಬೇರೆ ಲಾಂಗ್ ಎಂದು ದೃಢಪಟ್ಟಿದೆ. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಫೈಬರ್ ಲಾಂಗ್ ನೀಡಿದ್ದಾರೆ. ಅಸಲಿ ಮಚ್ಚನ್ನು ಸೀಜ್ ಮಾಡಬೇಕಿದೆ.

ಜಪ್ತಿ ಮಾಡದೆ ತನಿಖೆ ಸಾಧ್ಯವಿಲ್ಲ. ಸೀಜ್ ಮಾಡಿ ಮಹಜರು ಮಾಡದಿದ್ದರೆ ತನಿಖೆ ಅಪೂರ್ಣವಾಗುತ್ತೆ. ಬೆಳಗ್ಗೆ 10.29ಕ್ಕೆ ವಿಚಾರಣೆಗೆ ಕರೆದರೆ ಮಧ್ಯಾಹ್ನ 2.29ಕ್ಕೆ ಬರುತ್ತಾರೆ. ಹಾಗಾಗಿ ಪೊಲೀಸ್ ಕಸ್ಟಡಿಗೆ ಇವರನ್ನು ನೀಡಬೇಕು’ ಎಂದು ಪೊಲೀಸರ ಪರ ಪಬ್ಲಿಕ್​ ಪ್ರಾಸಿಕ್ಯೂಟರ್ ಹರೀಶ್‌ ಚಂದ್ರಗೌಡ ವಾದಿಸಿದ್ದಾರೆ.

‘ರಜತ್ ಮತ್ತು ವಿನಯ್ ಭಯ ಉಂಟುಮಾಡುವ ರೀತಿಯಲ್ಲಿ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ’ ಎಂದು ಪೊಲೀಸರ ಪರ ಲಾಯರ್ ವಾದಿಸಿದ್ದಾರೆ.

ಇದನ್ನೂ ಓದಿಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ 6 ವರ್ಷಗಳ ಕಾಲ ಉಚ್ಛಾಟನೆ..! ಕೇಂದ್ರ ನಾಯಕರ ನೋಟಿಸ್ ಗೂ ಉತ್ತರಿಸದ ಫೈರ್ ಬ್ರ್ಯಾಂಡ್..!

See also  ಬೆಳ್ತಂಗಡಿ: ಹರೀಶ್ ಪೂಂಜಾ ವಿರುದ್ಧ ಮತ್ತೊಂದು ಎಫ್ ಐ ಆರ್, ಸಿಎಂ ಸಿದ್ದರಾಮಯ್ಯ ನಾಮಫಲಕ ತಿರುಚಿದ್ದು ಹೇಗೆ? ಏನಿದು ಪ್ರಕರಣ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget