ನ್ಯೂಸ್ ನಾಟೌಟ್: ಟ್ರಾಫಿಕ್ ಲೈಟ್ ನ ಹಸಿರು ದೀಪ ಉರಿಯುತ್ತಿತ್ತು, ಆದರೂ ಪೊಲೀಸ್ ಅಧಿಕಾರಿಯ ಪತ್ನಿ ರಸ್ತೆಯ ಮಧ್ಯದಲ್ಲಿ ರೀಲ್ಸ್ ಗಳನ್ನು ಮಾಡುತ್ತಲೇ ಇದ್ದರು. ಇದರಿಂದ ರಸ್ತೆಯಲ್ಲಿ ಬಹಳ ಹೊತ್ತು ವಾಹನ ದಟ್ಟಣೆ ಉಂಟಾಗಿತ್ತು. ಈ ವಿಡಿಯೋ ವೈರಲ್ ಆದ ತಕ್ಷಣ ಕ್ರಮ ಕೈಗೊಳ್ಳಲಾಗಿದೆ.
ಚಂಡೀಗಢದಲ್ಲಿ ಒಬ್ಬ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಪತ್ನಿ ರಸ್ತೆಯಲ್ಲಿ ರೀಲ್ಸ್ ಮಾಡುತ್ತಿರುವ ವಿಡಿಯೋ ಚಿತ್ರೀಕರಿಸಲಾಗಿದ್ದು, ಇದರಿಂದಾಗಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಈ ಕೃತ್ಯದಿಂದಾಗಿ, ಪೊಲೀಸರು ಆ ಮಹಿಳೆಯ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಆಕೆಯ ರೀಲ್ಸ್ ನಿಂದಾಗಿ ಟ್ರಾಫಿಕ್ ಜಾಮ್ ಆದ ತಕ್ಷಣ, ಪೊಲೀಸರು ಕಾರ್ಯಪ್ರವೃತ್ತರಾಗಿ ಮಹಿಳೆಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
चंडीगढ़ः पुलिस कर्मी की पत्नी और बहन ने रेड लाइट के बीच बनाई रील, गिरफ्तारी के बाद थाने से मिली बेल.#Chandigarhvibes #Reels #reelsvideo pic.twitter.com/tmk6qkLWIz
— Vinod Katwal (@Katwal_Vinod) March 27, 2025
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದು, ನಾವು ಸಣ್ಣ ರೂಲ್ಸ್ ಬ್ರೇಕ್ ಮಾಡಿದರೂ ದಂಡ ಹಾಕೋ ಟ್ರಾಫಿಕ್ ಪೊಲೀಸ್ ಹೆಂಡತಿ ಹೀಗೆ ಮಾಡಬಹುದಾ? ಆಕೆಗೂ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರು ಆ ಮಹಿಳೆ ವಿರುದ್ಧ ಎಫ್ ಐಆರ್ ದಾಖಲಿಸಿ, ವಿಚಾರಣೆ ನಡೆಸಿದ್ದಾರೆ. ಬಳಿಕ ಆ ಮಹಿಳೆಗೆ ಪೊಲೀಸ್ ಠಾಣೆಯಿಂದಲೇ ಜಾಮೀನು ಸಿಕ್ಕಿದೆ. ಮಾರ್ಚ್ 27ರಂದು ಆ ವಿಡಿಯೋ ಹಂಚಿಕೊಳ್ಳಲಾಗಿದೆ.
ನಾಳೆಯಿಂದ(ಎ.1) ಕಸಕ್ಕೂ ಟ್ಯಾಕ್ಸ್ ಕಟ್ಟಬೇಕು..! ‘ಬಿಬಿಎಂಪಿ’ಯಿಂದ ಹೊಸ ನಿಯಮ..!