ನ್ಯೂಸ್ ನಾಟೌಟ್: ಸೋಷಿಯಲ್ ಮೀಡಿಯಾ ದಲ್ಲಿ ಫೇಮಸ್ ಆಗುವ ಸಲುವಾಗಿ ರೀಲ್ಸ್ ಮಾಡಿ ನಾನಾ ರೀತಿಯ ಸಾಹಸಗಳನ್ನು ಮಾಡುತ್ತಿರುತ್ತಾರೆ. ಇಲ್ಲೊಬ್ಬ ಯುವಕನು ರೀಲ್ಸ್ ಕ್ರೇಜ್ ಗೆ ಬಿದ್ದು ಎದುರಿಗೆ ರೈಲು ಬರುತ್ತಿದ್ದರೂ ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಘಟನೆಯೂ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆ (unnao district) ಯ ಕುಸುಂಬಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಏಪ್ರಿಲ್ 7 ರಂದು sachin gupta ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಯುವಕನನ್ನು ರಂಜೀತ್ ಚೌರಾಸಿಯಾ ಎಂದು ಗುರುತಿಸಲಾಗಿದೆ.
ಯುವಕನೊಬ್ಬನು ರೈಲ್ವೆ ಹಳಿ ಮೇಲೆ ಮಲಗಿರುವುರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಈ ವೇಳೆಯಲ್ಲಿ ರೀಲ್ಸ್ ಮಾಡಲು ಮೊಬೈಲ್ ಕ್ಯಾಮೆರಾ ಆನ್ ಮಾಡಿ ಎದುರಿಗೆ ಹಿಡಿದಿದ್ದಾನೆ. ಆದರೆ ಮುಂಭಾಗದಲ್ಲಿ ರೈಲು ಬರುತ್ತಿದ್ದಂತೆ ಸ್ವಲ್ಪವು ಅಲುಗಾಡದೇ ಹಾಗೆಯೇ ಮಲಗಿದ್ದಾನೆ. ರೈಲು ಹೋದ ಬಳಿಕ ಹಳಿಗಳ ಮೇಲಿಂದ ಎದ್ದು ಹೋಗಿದ್ದಾನೆ.
इस रीलपुत्र का नाम रंजीत चौरसिया है। पटरी पर लेटा, अपने ऊपर से पूरी ट्रेन गुजार दी। बाकायदा इसकी रील बनाई। अब रीलपुत्र गिरफ्तार है और जेल जा रहा है।
📍जिला उन्नाव, उत्तर प्रदेश pic.twitter.com/7IrQ42MDsM— Sachin Gupta (@SachinGuptaUP) April 7, 2025
ಈ ರೀಲ್ಸ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು ವೈರಲ್ ಆಗುತ್ತಿದ್ದಂತೆ ರೈಲ್ವೆ ಹಳಿಗಳಲ್ಲಿ ಸುರಕ್ಷತೆಗೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ರೈಲ್ವೆ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.