ಕ್ರೈಂವಿಡಿಯೋವೈರಲ್ ನ್ಯೂಸ್

ಆಸ್ಪತ್ರೆಯಲ್ಲಿ ರೀಲ್ಸ್‌ ಮಾಡಿದ ಮೆಡಿಕಲ್‌ ವಿದ್ಯಾರ್ಥಿಗಳು ಅಮಾನತ್ತು..! ಇಲ್ಲಿವೆ ವೈರಲ್ ವಿಡಿಯೋಗಳು

207

ನ್ಯೂಸ್ ನಾಟೌಟ್: ಆಸ್ಪತ್ರೆ ಆವರಣದಲ್ಲಿ ರೀಲ್ಸ್‌ ಮಾಡಿದ ನಂತರ 38 ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಘಟನೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಆಸ್ಪತ್ರೆಯಲ್ಲಿ ನಡೆದಿದೆ.

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಹಾಗೂ ಹಿಂದಿ ಹಾಡಿಗೆ ನೃತ್ಯ ಮಾಡುವುದುದು ಕಂಡುಬಂದಿದೆ. ಇದು ವೈರಲ್‌ ಆದ ಬೆನ್ನಲ್ಲೇ ಜಿಮ್ಸ್‌ ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ಸಸ್ಪೆಂಡ್‌ ಮಾಡಿದೆ ಎಂದು ವರದಿ ತಿಳಿಸಿದೆ.ಗದಗ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್‌ ವಿದ್ಯಾರ್ಥಿಗಳು ರೀಲ್ಸ್‌ ಮಾಡಿದ್ದು, ಈ ವಿಡಿಯೋ ಇದೀಗ ಎಲ್ಲಡೆ ಹರಿದಾಡುತ್ತಿದೆ.

ಈ ಸಂಬಂಧ 38 ವೈದ್ಯಕೀಯ ವಿದ್ಯಾರ್ಥಿಗಳನ್ನು ಅಲ್ಲಿನ ಆಡಳಿತ ಮಂಡಳಿ ಅಮಾನತು ಮಾಡಿದೆ.”ಕೆಲಸದ ಸಂದರ್ಭಗಳಲ್ಲಿ ಎಂಥೆತಾ ದೊಡ್ಡ ಅಧಿಕಾರಿಗಳು ದೊಡ್ಡ ತಪ್ಪುಗಳನ್ನು ಮಾಡುತ್ತಾರೆ. ಅಂತಹವರ ವಿರುದ್ಧ ಕ್ರಮ ಜರುಗಿಸಿ.

ಉದಾಹರಣಿಗೆ ಕೆಲಸಕ್ಕೆ ತಡವಾಗಿ ಬರುವುರು, ವೃತ್ತಿ ಧರ್ಮಕ್ಕೆ ದ್ರೋಹ ಬಗೆಯುತ್ತಿರುವವರನ್ನು ಅಮಾನತು ಮಾಡಿ. ಅದು ಬಿಟ್ಟು ಕೆಲಸದ ಒತ್ತಡವನ್ನು ನಿವಾರಿಸಿಕೊಳ್ಳಲು ರೀಲ್ಸ್‌ ಮಾಡುವ ವಿದ್ಯಾರ್ಥಿಗಳನ್ನು ಅಮಾನತು ಮಾಡುವುದು ಎಷ್ಟರ ಮಟ್ಟಿಗೆ ಸರಿ” ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.ಇತ್ತೀಚೆಗಷ್ಟೇ ವೈದ್ಯನೊಬ್ಬ ಚಿತ್ರದುರ್ಗ ಜಿಲ್ಲೆಯ ಭರಮಸಾಗದಲ್ಲಿ ಫ್ರೀ ವೆಡ್ಡಿಂಗ್‌ ಶೂಟ್‌ ಮಾಡಿಕೊಳಳ್ಳಲೆಂದೇ ವೈಯಕ್ತಿಕ ಉದ್ದೇಶದಿಂದ ಆಸ್ಪತ್ರೆಯನ್ನು ಬಳಸಿಕೊಂಡಿದ್ದರು. ಹೀಗೆ ಕರ್ತವ್ಯದ ವೇಳೆ ವೈದ್ಯರು ತಮ್ಮ ಜವಾಬ್ದಾರಿ ಮರೆತರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದು ಒಳಿತು ಎಂದು ಕಮೆಂಟ್ಸ್ ಗಳು ಬಂದಿವೆ.

See also  ಕಾಲೇಜಿನಲ್ಲೇ ಯುವಕ-ಯುವತಿಯ ಲವ್ವಿ ಡವ್ವಿ, ವಿಡಿಯೋ ವೈರಲ್ ಪ್ರಕರಣಕ್ಕೆ ಟ್ವಿಸ್ಟ್! ವಿದ್ಯಾರ್ಥಿಗಳಿಬ್ಬರೂ ಆತ್ಮಹತ್ಯೆಗೆ ಶರಣು!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget