Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಮನೆಗೆಲಸದ ನಡುವೆ ರೀಲ್ಸ್ ಮಾಡಲು ಸಮಯವೇ ಸಿಗುತ್ತಿಲ್ಲವೆಂದು ಗಂಡನ ಮೇಲೆ ಪೊಲೀಸ್ ದೂರು ಕೊಟ್ಟ ಪತ್ನಿ..! ಇಲ್ಲಿದೆ ಸಂಪೂರ್ಣ ಮಾಹಿತಿ

680

ನ್ಯೂಸ್ ನಾಟೌಟ್: ಗಂಡನಿಂದಾಗಿ ಇನ್ ಸ್ಟಾ ಗ್ರಾಮ್ ನಲ್ಲಿ ಇಬ್ಬರು ಫಾಲೋವರ್ ಗಳು ಕಡಿಮೆಯಾಗಿದ್ದಾರೆ ಎಂಬ ಕಾರಣಕ್ಕೇ ಮಹಿಳೆಯೊಬ್ಬಳು ತನ್ನ ಪತಿಯ ವಿರುದ್ಧವೇ ಪೊಲೀಸ್ ದೂರು ನೀಡಿರುವ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಈ ಘಟನೆ ನಡೆದಿದ್ದು, ‘ಮನೆಗೆಲಸದ ನಡುವೆ Reels ಮಾಡಲು ಸಮಯವೇ ಸಿಗುತ್ತಿಲ್ಲ.. ಗಂಡನಿಂದಾಗಿ ಇಬ್ಬರು Instagram followers ಕಡಿಮೆ ಆಗಿದ್ದಾರೆ ಎಂದು ಆರೋಪಿಸಿ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪಿಲ್ಖುವಾ ಮೂಲದ ನಿಶಾ ಎಂಬ ಮಹಿಳೆ ನೋಯ್ಡಾ ನಿವಾಸಿ ವಿಜೇಂದ್ರ ಎಂಬವರನ್ನು ವಿವಾಹವಾಗಿದ್ದರು. ಗಂಡನಿಂದಾಗಿ ರೀಲ್ಸ್ ಮಾಡಲು ಸಮಯವೇ ಸಿಗುತ್ತಿಲ್ಲ. ಹೀಗಾಗಿ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿನ ಫಾಲೋವರ್ ಗಳ ಸಂಖ್ಯೆಯಲ್ಲಿ 2 ಕಡಿಮೆಯಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಇನ್ನು ಮದುವೆಯಾದಾಗಿನಿಂದಲೂ ರೀಲ್ಸ್ ಗೀಳಿಗೆ ದಾಸಿಯಾಗಿರುವ ಪತ್ನಿಯ ವಿರುದ್ಧ ಪತಿ ವಿಜೇಂದ್ರ ಅಸಮಾಧಾನಗೊಂಡಿದ್ದರು. ಜಾಸ್ತಿ ಮೊಬೈಲ್ ಬಳಕೆ ಮಾಡಬೇಡ ಎಂದು ಪತಿ ವಿಜೇಂದ್ರ ಪತ್ನಿ ನಿಶಾಗೆ ತಾಕೀತು ಮಾಡಿದ್ದ. ವಿಜೇಂದ್ರ ತಮ್ಮ ಆನ್‌ ಲೈನ್ ಚಟುವಟಿಕೆಗಳನ್ನು ಕಡಿಮೆ ಮಾಡಿ ಮನೆಯ ಜವಾಬ್ದಾರಿಗಳಿಗೆ ಹೆಚ್ಚಿನ ಗಮನ ನೀಡಬೇಕೆಂದು ಈ ಹಿಂದೆ ಸೂಚಿಸಿದ್ದ. ಇದರಿಂದಾಗಿ ನಿಶಾ ಕೂಡ ಹೆಚ್ಚಾಗಿ ರೀಲ್ಸ್ ಮಾಡಲು ಸಾಧ್ಯವಾಗಿರಲಿಲ್ಲ. ಇದೇ ವಿಚಾರವಾಗಿ ಇಬ್ಬರ ನಡುವೆಯೂ ಆಗಾಗ ಜಗಳ ಏರ್ಪಡುತ್ತಿತ್ತು ಎನ್ನಲಾಗಿದೆ.

ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಕಾರು ಹತ್ತಿಸಿದ ವ್ಯಕ್ತಿ..! ಮಹಿಳಾ ಕಾನ್ ಸ್ಟೇಬಲ್ ಸಾವು, ಇಬ್ಬರು ಇನ್ಸ್‌ ಪೆಕ್ಟರ್‌ ಗಳಿಗೆ ಗಂಭೀರ ಗಾಯ..!

See also  ಬೆಳ್ತಂಗಡಿ : ರಸ್ತೆ ಬದಿ ಐದು ಗ್ರನೇಡ್ ಪತ್ತೆ, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget