Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ರೀಲ್ಸ್‌ ಗಾಗಿ ರಸ್ತೆಯಲ್ಲೇ ಜನರಿಗೆ ಬಿಯರ್‌ ಹಂಚಿದ್ದ ಯುವಕರು..! 7 ಮಂದಿ ಅರೆಸ್ಟ್..!

413

ನ್ಯೂಸ್ ನಾಟೌಟ್ : ಇತ್ತೀಚೆಗೆ ಜೈಪುರ್‌ ನಲ್ಲಿ ರೀಲ್ಸ್ ಹುಚ್ಚಾಟವೊಂದು ನಡೆದಿದ್ದು, ಜೂನ್‌ 6ರಂದು ಯುಟ್ಯೂಬ್ ಇನ್‌ ಫ್ಲೂಯೆನ್ಸರ್‌ ರೀಲ್ಸ್‌ ಗಾಗಿ ಹಾಡಹಗಲೇ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ, ಪಾದಚಾರಿಗಳಿಗೆ ಬಿಯರ್‌ ಹಂಚಿರುವುದು ಘಟನೆ ನಡೆದಿತ್ತು. ಇದರ ವಿಡಿಯೋ ರೀಲ್ಸ್ ಎಲ್ಲೆಡೆ ವೈರಲ್ ಆಗಿತ್ತು.

ಸ್ಥಳೀಯ ಸಾಮಾಜಿಕ ಜಾಲತಾಣದ ಲಪ್ಪು ಸಚಿನ್‌ ಎಂಬಾತ ಜನನಿಬಿಢ ಜೈಪುರ್‌ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಬಿಯರ್‌ ಅನ್ನು ಹಂಚುತ್ತಿರುವ ವಿಡಿಯೋ ವೈರಲ್‌ ಆಗಿದೆ. ಇದು ಕೇವಲ ಧಾರ್ಮಿಕ ಭಾವನೆಗೆ ಮಾತ್ರ ಧಕ್ಕೆ ತಂದಿರುವುದಲ್ಲ, ಸಾರ್ವಜನಿಕವಾಗಿ ಕಾನೂನನ್ನು ಗಾಳಿಗೆ ತೂರಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಕಿಡಿಕಾರಿದ್ದರು.

ಬಿಯರ್‌ ಹಂಚಿದ್ದ ಏಳು ಮಂದಿಯನ್ನು ಬಂಧಿಸಿರುವುದಾಗಿ ವರದಿಯಾಗಿದ್ದು, ಅವರನ್ನು ಕಿವಿ ಹಿಡಿಸಿ ಪೊಲೀಸರು ಸಾರ್ವಜನಿಕರಲ್ಲಿ ಕ್ಷಮೆ ಕೇಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

See also  ಕಾಲಭೈರವ ದೇವಾಲಯದ ಗರ್ಭಗುಡಿಯೊಳಗೆ ಕೇಕ್ ಕತ್ತರಿಸಿ ಮಹಿಳೆಯ ಹುಚ್ಚಾಟ..! ಅರ್ಚಕರ ಬಗ್ಗೆಯೂ ಜನಾಕ್ರೋಶ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget