Latestಕ್ರೈಂವೈರಲ್ ನ್ಯೂಸ್ಸಿನಿಮಾ

ಮಾರಕಾಸ್ತ್ರದ ಜೊತೆ ರೀಲ್ಸ್ ಪ್ರಕರಣದಲ್ಲಿ ವಿನಯ್, ರಜತ್ ​ಗೆ ಜಾಮೀನು ಮಂಜೂರು..! ಆರೋಪಿಗಳ ಪರ ವಕೀಲರು ಹೇಳಿದ್ದೇನು..?

394

ನ್ಯೂಸ್‌ ನಾಟೌಟ್: ರೀಲ್ಸ್ ಮಾಡುವಾಗ ಮಚ್ಚು ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಬಿಗ್ ​ಬಾಸ್ ಸ್ಪರ್ಧಿಗಳಾದ ವಿನಯ್ ಮತ್ತು ರಜತ್ ಗೆ ಇಂದು(ಮಾ.28) ಜಾಮೀನು ಮಂಜೂರಾಗಿದೆ.

ವಿನಯ್ ಹಾಗೂ ರಜತ್ ಅವರು ಕೆಲ ದಿನಗಳ ಹಿಂದೆ ಇನ್ ​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋನಲ್ಲಿ ವಿನಯ್ ಮತ್ತು ರಜತ್ ಇಬ್ಬರೂ ಸಹ ಮಚ್ಚೊಂದನ್ನು ಹಿಡಿದುಕೊಂಡಿದ್ದರು. ಇದೇ ಕಾರಣಕ್ಕೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಸಾಕ್ಷ್ಯ ನಾಶ ಪ್ರಕರಣದಡಿ ಇಬ್ಬರನ್ನೂ ಬಂಧಿಸಲಾಗಿತ್ತು. ಇದೀಗ ಇಬ್ಬರಿಗೂ ಸಹ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.

24ನೇ ಎಸಿಜೆಎಂ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನೀಡಿದೆ. ಇಬ್ಬರಿಗೂ ಸಹ ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, 10 ಸಾವಿರ ರೂಪಾಯಿ ಶೂರಿಟಿ ನೀಡುವ ಷರತ್ತನ್ನು ನ್ಯಾಯಾಲಯ ವಿಧಿಸಿದೆ. ಇಂದು(ಮಾ.28) ನಡೆದ ವಿಚಾರಣೆಯಲ್ಲಿ ಪೊಲೀಸರ ಪರ ವಾದ ಮಾಡಿದ ವಕೀಲ ಚಂದ್ರೇಗೌಡ, ಆರೋಪಿಗಳು ಸಾಕ್ಷ್ಯನಾಶ ಮಾಡಿದ್ದು ಅವರಿಗೆ ಜಾಮೀನು ನೀಡಬಾರದು ಎಂದು ವಾದಿಸಿದರು.

ಆದರೆ ಆರೋಪಿಗಳ ಪರ ವಾದ ಮಂಡಿಸಿದ ವಕೀಲ, ಸರ್ಚ್ ವಾರಂಟ್ ತೆಗೆದುಕೊಂಡು ಮನೆಯನ್ನೆಲ್ಲಾ ಸರ್ಚ್ ಮಾಡಿದ್ದಾರೆ, ಮುಂದೆ ಏನೇ ಇದ್ದರೂ ಸಹಕಾರ ನೀಡುತ್ತಾರೆ. ವಿನಯ್ ಗೆ ಭಾನುವಾರ ಶೂಟಿಂಗ್ ಸಹ ಇದೆ. ಸಿನಿಮಾ ಮಾಡುತ್ತಿದ್ದಾರೆ. ಅವರು ಚಿತ್ರೀಕರಣದಲ್ಲಿ ಭಾಗಿ ಆಗಬೇಕಾದ ಅವಶ್ಯಕತೆ ಇದೆ. ಅವರಿಗೆ ಕಣ್ಣಿನ ಸಮಸ್ಯೆಯೂ ಇದೆ. ಹೀಗಾಗಿ ಬೇಲ್ ನೀಡಬೇಕೆಂದು ವಿನಯ್ ಪರ ವಕೀಲರ ಮನವಿ ಮಾಡಿದರು.

ಪೊಲೀಸರ ಕಸ್ಟಡಿಯಲ್ಲಿದ್ದ ವಿನಯ್ ಮತ್ತು ರಜತ್ ಅವರನ್ನು ಇದೀಗ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ಇಂದೇ ಷರತ್ತುಗಳನ್ನು ಪೂರೈಸಿ, ಜಾಮೀನು ಕಾಪಿಯನ್ನು ಜೈಲಿಗೆ ಕೊಂಡೊಯ್ದರೆ ಇಂದೇ ವಿನಯ್ ಹಾಗೂ ರಜತ್​ ಬಿಡುಗಡೆ ಆಗಲಿದ್ದಾರೆ.

ಇದನ್ನೂ ಓದಿನಾನು ಶುಕ್ರ ದೇವತೆ ಎಂದು ಕಿರುಚುತ್ತಾ ನಗ್ನಳಾಗಿ ವಿಮಾನ ನಿಲ್ದಾಣದಲ್ಲಿ ಓಡಾಡಿದ ಮಹಿಳೆ..! ಭದ್ರತಾ ಸಿಬ್ಬಂದಿಗಳಿಗೆ ಪೆನ್ಸಿಲ್ ನಿಂದ ಇರಿದು, ಮ್ಯಾನೇಜರ್ ಗೆ ಕಚ್ಚಿ ಹುಚ್ಚಾಟ..!

ಬಿಸಿಸಿಐನಲ್ಲಿ ಹುದ್ದೆಗೆ ಅರ್ಜಿ ಆಹ್ವಾನ..! ಯಾರೆಲ್ಲ ಅರ್ಜಿ ಸಲ್ಲಿಸಬಹುದು..? ಇಲ್ಲಿದೆ ಸಂಪೂರ್ಣ ಮಾಹಿತಿ

See also  4 ತಿಂಗಳಿನಿಂದ ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕ..! ಮಕ್ಕಳ ಕಲ್ಯಾಣ ಸಮಿತಿಯ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ ವಿದ್ಯಾರ್ಥಿನಿಯರು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget