Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ರೀಲ್ಸ್‌ ಗಾಗಿ ನಡು ರಸ್ತೆಯಲ್ಲಿ ಟೀ ಕುಡಿಯುತ್ತಾ ವ್ಯಕ್ತಿಯ ಹುಚ್ಚಾಟ..! ವಿಡಿಯೋ ವೈರಲ್

482
Spread the love

ನ್ಯೂಸ್ ನಾಟೌಟ್: ವಾಹನ ದಟ್ಟಣೆಯಿದ್ದ ರಸ್ತೆ ಮಧ್ಯೆ ಚಯರ್‌ ಹಾಕಿಕೊಂಡು ಟೀ ಕುಡಿಯುತ್ತಾ ರೀಲ್ಸ್‌ ಮಾಡಿ ಹುಚ್ಚಾಟ ಮಾಡಿದವನಿಗೆ ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಪ್ರಚಾರದ ತೆವಲಿಗೆ ಕಳೆದ ಏಪ್ರಿಲ್ 12 ರಂದು ವಾಹನ ಸಂಚಾರ ಹೆಚ್ಚಾಗಿರುವ ಎಸ್.ಜೆ.ಪಾರ್ಕ್ ಬಳಿ ರಸ್ತೆಯಲ್ಲಿ ರೀಲ್ಸ್ ಮಾಡುತ್ತಾ ಕಿರಿಕ್‌ ಮಾಡಿದ್ದ. ನಂತರ ಆ ರೀಲ್ಸ್‌ ಅನ್ನು ತನ್ನ ಇನ್‌ ಸ್ಟಾಗ್ರಾಮ್‌ ಖಾತೆ simbu_str_123 ನಲ್ಲಿ ಅಪ್ಲೋಡ್‌ ಮಾಡಿದ್ದ.

ಸಿಟಿ ಪೊಲೀಸ್ ಸೋಷಿಯಲ್ ಮೀಡಿಯಾ ವಿಂಗ್ ಪುಂಡನ ರೀಲ್ಸ್ ಗಮನಿಸಿತ್ತು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯುವಕರಿಗೆ ತಪ್ಪು ಸಂದೇಶ ನೀಡಿದಕಾನೂನಿನ ಅಡಿಯಲ್ಲಿ ಎಸ್.ಜೆ.ಪಾರ್ಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಪುಂಡನನ್ನು ಬಂಧಿಸಿದ್ದರು.

ಬೆಂಗಳೂರು ಪೊಲೀಸರು ಈಗ ಪುಂಡನ ರೀಲ್ಸ್‌ ಮತ್ತು ಬಂಧನ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿ ಮುಂದೆ ಯಾರಾದರೂ ಈ ರೀತಿ ಹುಚ್ಚಾಟ ಮಾಡಿದವರಿಗೆ ಬಿಸಿ ಮುಟ್ಟಿಸಲಾಗುವುದು ಎಚ್ಚರಿಕೆ ನೀಡಿದ್ದಾರೆ.

ತಾಯಿ ನಾಯಿಯ ಎದುರೇ ಐದು ನಾಯಿ ಮರಿಗಳನ್ನು ನೆಲಕ್ಕೆ ಬಡಿದು ಕಲ್ಲಿನಿಂದ ಜಜ್ಜಿ ಕೊಂದ ಕ್ರೂರಿ..! ಮನಕಲಕುವ ವಿಡಿಯೋ ವೈರಲ್

ಹೆಂಡತಿಯ ಎದುರೇ ಗಂಡನ ಶಿರಚ್ಛೇದ ಮಾಡಿ ತಲೆ ತೆಗೆದುಕೊಂಡು ಪರಾರಿ..! ದೇವಸ್ಥಾನದ ಬಳಿ ರುಂಡ ಪತ್ತೆ..!

See also  ಬೆಳ್ಳಂಬೆಳಿಗ್ಗೆ ಅಕ್ರಮ ಮೈಕ್ರೋ ಫೈನಾನ್ಸ್ ದಂಧೆಕೋರರ ಮನೆಗಳ ಮೇಲೆ ಪೊಲೀಸ್ ದಾಳಿ..! ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ ಆರೋಪ..!
  Ad Widget   Ad Widget   Ad Widget   Ad Widget   Ad Widget   Ad Widget