Latestಕ್ರೈಂಬೆಂಗಳೂರುರಾಜ್ಯ

ರೀಲ್ಸ್ ಮಾಡುತ್ತಾ14ನೇ ಮಹಡಿಯಿಂದ ಜಾರಿ ಬಿದ್ದು ಯುವತಿ ಸಾವು..! ಹಳ್ಳಿಯಿಂದ ಬೆಂಗಳೂರಿಗೆ ಬಂದ ಪೋಷಕರು ಹೇಳಿದ್ದೇನು..?

758

ನ್ಯೂಸ್ ನಾಟೌಟ್: ರೀಲ್ಸ್‌ ಮಾಡುವಾಗ ನಿರ್ಮಾಣ ಹಂತದ ಕಟ್ಟಡದ 14ನೇ ಮಹಡಿ ಯಿಂದ ಯುವತಿಯೊಬ್ಬಳು ಜಾರಿಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ(ಜೂ.23) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಆಂಧ್ರದ ಬೋಯಲ ಎಂಬಲ್ಲಿನ ನಂದಿನಿ (21) ಮೃತ ಯುವತಿ ಎಂದು ಗುರುತಿಸಲಾಗಿದೆ.

ಚಿತ್ತೂರು ಮೂಲದ ನಂದಿನಿ ಬಿ.ಕಾಂ ಪದವೀಧರೆಯಾಗಿದ್ದು, ನಗರದ ಭುವನೇಶ್ವರಿ ಲೇಔಟ್‌ ನ ಪಿಜಿಯೊಂದರಲ್ಲಿ ವಾಸಿಸುತ್ತಿದ್ದಳು. ರಿಲಯನ್ಸ್‌ ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಈಕೆ, ಸೋಮವಾರ ಸಂಜೆ ಕೆಲಸದಿಂದ ಪಿಜಿಗೆ ಬಂದಿದ್ದಾಳೆ. ನಂತರ ತನ್ನ ಸ್ನೇಹಿತೆ ಹಾಗೂ ಇಬ್ಬರು ಸ್ನೇಹಿತರ ಜತೆ ಪಾರ್ಟಿ ಮಾಡಲು ರಾಯಸಂದ್ರ ಮುಖ್ಯರಸ್ತೆ ಸಮೀಪವಿರುವ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ ವೊಂದಕ್ಕೆ ಹೋಗಿದ್ದರು. ನಾಲ್ವರು ರಾತ್ರಿ 9 ಗಂಟೆಯವರೆಗೂ ಮದ್ಯದ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮುಗಿದ ಬಳಿಕ “ತಾನು ಬೇಜಾರಿ ನಲ್ಲಿದ್ದು, ರೀಲ್ಸ್‌ ಮಾಡಬೇಕು’ ಎಂದು ಹಠಹಿಡಿದ ಈಕೆ, ಸ್ನೇಹಿತೆಯ ಮೊಬೈಲ್‌ ಪಡೆದು ಕಟ್ಟಡದ 14ನೇ ಮಹಡಿಗೆ ತೆರಳಿ ರೀಲ್ಸ್‌ ಮಾಡುತ್ತಿದ್ದಳು. ಈ ವೇಳೆ ಕಾಲುಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಪುತ್ರಿಯ ಸಾವಿನ ವಿಚಾರ ತಿಳಿದ ನಂದಿನಿ ಪೋಷಕರು ಬೆಂಗಳೂರಿಗೆ ಬಂದಿದ್ದು, ಮಗಳು ನಂದಿನಿ ಜತೆಗಿದ್ದ ಇಬ್ಬರು ಯುವಕರು ಹಾಗೂ ಸ್ನೇಹಿತೆಯನ್ನು ವಿಚಾರಣೆ ನಡೆಸುವಂತೆ ದೂರಿನಲ್ಲಿ ಕೋರಿದ್ದಾರೆ. ಈ ನಿಟ್ಟಿನಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಭದ್ರತೆಗಾಗಿ ಹೊಸ ಬುಲೆಟ್‌ ಪ್ರೂಫ್‌ ಕಾರು ಖರೀದಿಸಿದ ಸಲ್ಮಾನ್ ಖಾನ್..! ಜೈಲಲ್ಲಿದ್ದುಕೊಂಡೇ ನಟನ ಮೇಲೆ ಕಣ್ಣಿಟ್ಟ ಲಾರೆನ್ಸ್ ಬಿಷ್ಣೋಯ್…!

ಆಕ್ಸಿಯಮ್​ ಮಿಷನ್​ 4 ಉಡಾವಣೆ ಯಶಸ್ವಿ, 40 ವರ್ಷದ ಬಳಿಕ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ..!

See also  8 ತಿಂಗಳ ಮಗುವಿನ ಗಂಟಲಲ್ಲಿ ತೆಂಗಿನ ಕಾಯಿ ತುಂಡು..!ಮುಂದೇನಾಯ್ತು?ವೈದ್ಯರು ಹೇಳಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget