ನ್ಯೂಸ್ ನಾಟೌಟ್: ರೆಡ್ ಸಿಗ್ನಲ್ ಬಿದ್ದ ಕಾರಣ ತಕ್ಷಣ ಹೋಗಲು ಸಾಧ್ಯವಾಗದೆ ಆಂಬ್ಯುಲೆನ್ಸ್ ನಡು ರಸ್ತೆಯಲ್ಲಿಯೇ ಸಿಕ್ಕಿ ಹಾಕಿಕೊಂಡಿತ್ತು. ಇದನ್ನು ಕಂಡಂತಹ ಯುಟ್ಯೂಬರ್ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಅಂಬ್ಯುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟಿದ್ದಾನೆ.
ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಯುವಕನ ಈ ತ್ವರಿತ ಹಾಗೂ ಮಾನವೀಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
ಟ್ರಾಫಿಕ್ ಕಾರಣದಿಂದಾಗಿ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಗಳಿಗೆ ಸಮಯಕ್ಕೆ ಸರಿಯಾಗಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಕಷ್ಟಸಾಧ್ಯವಾಗುತ್ತದೆ.
🚨Viral video#Bengaluru-based #YouTuber stepped up to clear the way for an ambulance stuck in heavy traffic. pic.twitter.com/k30o9lN75g
— Backchod Indian (@IndianBackchod) March 25, 2025
ರೆಡ್ ಸಿಗ್ನಲ್ ಬಿದ್ದ ಕಾರಣ ಆಂಬ್ಯುಲೆನ್ಸ್ ನಡು ರಸ್ತೆಯಲ್ಲಿಯೇ ಸಿಕ್ಕಿ ಹಾಕಿಕೊಂಡಿದೆ. ಇದನ್ನು ಕಂಡಂತಹ ಯುಟ್ಯೂಬರ್ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ತನ್ನ ತ್ವರಿತ ಚಿಂತನೆಯ ಮೂಲಕ ಅಂಬ್ಯುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟಿದ್ದಾನೆ.