ನ್ಯೂಸ್ ನಾಟೌಟ್: ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡೋದು ಸಾಮಾನ್ಯ. ಸಾಕಷ್ಟು ಸಿದ್ಧತೆಗಳೊಂದಿಗೆ ಅವರು ನಟನೆಗೆ ಕಾಲಿಡುತ್ತಾರೆ. ಈಗ ಉಪೇಂದ್ರ ಮಗ ಆಯುಷ್ ಬಣ್ಣದ ಲೋಕಕ್ಕೆ ಕಾಲಿಡಲು ರೆಡಿ ಆಗಿದ್ದಾರೆ. ಉಪ್ಪಿ ಪುತ್ರನ ಹುಟ್ಟುಹಬ್ಬದ ದಿನದಂದು ಇಡೀ ಕುಟುಂಬ ಮಂತ್ರಾಲಯಕ್ಕೆ ಭೇಟಿ ನೀಡಿದೆ. ಈ ವೇಳೆ ಆಯುಷ್ ಮೊದಲ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿದೆ ಎಂದು ವರದಿ ಆಗಿದೆ.
ಉಪೇಂದ್ರ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಿರ್ದೇಶಕರಾಗಿ ಹೆಸರು ಮಾಡಿರೋ ಅವರು ಆ ಬಳಿಕ ಹೀರೋ ಆಗಿ ಮಿಂಚಿದರು. ಆಯುಷ್ ತಾಯಿ ಪ್ರಿಯಾಂಕಾ ಉಪೇಂದ್ರ ಕೂಡ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗ ಅವರು ತಮ್ಮ ಮಗನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಲು ರೆಡಿ ಆಗಿದ್ದಾರೆ. ಈ ವಿಚಾರ ಉಪ್ಪಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಿನಿಮಾ ಆದಷ್ಟು ಬೇಗ ತೆರೆಗೆ ಬರಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ.
ಯಶ್ ಸಿನಿಮಾ ನಿರ್ದೇಶನ ಮಾಡಿದ್ದ ಡೈರೆಕ್ಟರ್ ಉಪೇಂದ್ರ ಮಗನನ್ನು ಲಾಂಚ್ ಮಾಡುತ್ತಿದ್ದಾರೆ. ‘ಮೊದಲ ಸಲ’ ಎಂಬ ಚಿತ್ರವನ್ನು ಪುರುಷೋತ್ತಮ್ ಡೈರೆಕ್ಷನ್ ಮಾಡಿದ್ದರು. ಈಗ ಅವರು ಆಯುಷ್ ಮೊದಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಅಮೆಜಾನ್ ನಲ್ಲಿ 70,000 ಲಾಲಿಪಾಪ್ ಆರ್ಡರ್ ಮಾಡಿದ ಬಾಲಕ..! ತಾಯಿಗೆ ಹಣ ಕಡಿತಗೊಂಡ ಮೆಸೇಜ್ ಬಂದಾಗಲೇ ಗೊತ್ತು..!