Uncategorized

ರಿಯಲ್ ಪಿಸ್ತೂಲ್ ನಲ್ಲಿ ಮಕ್ಕಳ ಆಟ, ಫೈರ್‌, ಏಳು ವರ್ಷದ ಬಾಲಕ ಸ್ಥಳದಲ್ಲೇ ಸಾವು

ನ್ಯೂಸ್ ನಾಟೌಟ್: ಬಾಲಕರಿಬ್ಬರ ಹುಡುಗಾಟದಿಂದ ಒಂದು ಪುಟ್ಟ ಜೀವ ಬಲಿಯಾದ ಘಟನೆ ರಾಜ್ಯದ ರಾಮನಗರದ ಕಾಡಶಿವನಹಳ್ಳಿ ಎಂಬಲ್ಲಿ ಶನಿವಾರ ನಡೆದಿದೆ.

ತೋಟದ ಮನೆಯಲ್ಲಿ ಆಟವಾಡುತ್ತಿದ್ದ ಮಕ್ಕಳು ನಾಡ ಬಂದೂಕನ್ನು ಹಿಡಿದುಕೊಂಡು ಆಟವಾಡಿದ್ದಾರೆ. ಮನೆಯವರು ಮಕ್ಕಳ ಕೈಗೆ ಸಿಗುವಂತೆ ಬಂದೂಕನ್ನು ಇಟ್ಟಿದ್ದರು. ಈ ವೇಳೆ ಹಿರಿಯ ಸಹೋದರ ಲೋಡೆಡ್ ಗನ್ ಅನ್ನು ಟ್ರಿಗರ್ ಮಾಡಿದ್ದಾನೆ. ಇದು ಎದುರಿಗಿದ್ದ ಏಳು ವರ್ಷದ ಕಿರಿಯ ಸಹೋದರನಿಗೆ ಸಿಕ್ಕಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಏಳು ವರ್ಷದ ಶಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದೀಗ ಕೋಡಿಹಳ್ಳಿ ಪೊಲೀಸರು ಮಲ್ಲೇಶ ಹಾಗೂ ಸಾಜಿದ್‌ನನ್ನು ಬಂಧಿಸಿದ್ದಾರೆ.

Related posts

ಕಾರ್ಕಳ ದ ಕೋಟೆಯಲ್ಲಿ ೩೦೦ ಕ್ಕೂ ಹೆಚ್ಚು ಫಿರಂಗಿ ಗುಂಡು ಪತ್ತೆ

ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ..! ಮೂರು ತಿಂಗಳ ಹಿಂದೆಯಷ್ಟೇ 2ನೇ ಮದುವೆಯಾಗಿದ್ದ ಮಹಿಳೆ..!

ಕೇರಳ: ತಂದೆ, ಇಬ್ಬರು ಮಕ್ಕಳ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ, ಏನಿದು ಘಟನೆ?