ದೇಶ-ವಿದೇಶರಾಜ್ಯವೈರಲ್ ನ್ಯೂಸ್ಸಿನಿಮಾ

ರೀಲ್ ಹೀರೋಗಳ ಮಧ್ಯೆ ಮಾದರಿಯಾದ ರಿಯಲ್ ಹೀರೋ ಸೂಪರ್ ಸ್ಟಾರ್ ಮಹೇಶ್ ಬಾಬು..! ಹಾಸಿಗೆ ಹಿಡಿದ ಅಭಿಮಾನಿಯ ಕುಟುಂಬವನ್ನು ದತ್ತು ಪಡೆದ ನಟ..!

270

ನ್ಯೂಸ್ ನಾಟೌಟ್ : ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಇತ್ತೀಚಿಗಷ್ಟೇ ಮಹೇಶ್​​ ಬಾಬು ಅನಾರೊಗ್ಯದಿಂದ ಹಾಸಿಗೆ ಹಿಡಿದ ತನ್ನ ಅಭಿಮಾನಿಯ ಕುಟುಂಬವನ್ನು ದತ್ತು ಪಡೆದು ಬೀದಿಗೆ ಬಿದ್ದಿದ್ದ ಕುಟುಂಬಕ್ಕೆ ಆರ್ಥಿಕವಾಗಿ ಮಾತ್ರವಲ್ಲದೆ ಇಡೀ ಕುಟುಂಬದ ಜವಾಬ್ದಾರಿ ವಹಿಸಿಕೊಂಡು ಸಹಾಯ ಮಾಡಿದ್ದಾರೆ.

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ರಾಜೇಶ್ ಎಂಬವರು ಮಹೇಶ್ ಬಾಬು ಅವರ ಕಟ್ಟಾ ಅಭಿಮಾನಿ ಎನ್ನಲಾಗಿದೆ. ಆದರೆ, ಕೆಲ ದಿನಗಳಿಂದ ರಾಜೇಶ್​​ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲಿ ಹಾಸಿಗೆ ಹಿಡಿದ್ದಿದ್ದರು. ಮನೆಯ ಆಧಾರ ಸ್ಥಂಭವಾಗಿದ್ದ ರಾಜೇಶ್ ಹಾಸಿಗೆ ಹಿಡಿದಿದ್ದರಿಂದ ಆತನ ಕುಟುಂಬ ಆರ್ಥಿಕ ಸಮಸ್ಯೆ ಅನುಭವಿಸಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳ ಮೂಲಕ ಮಹೇಶ್ ಬಾಬು ಗಮನಕ್ಕೆ ಬಂದಿದೆ. ಕೂಡಲೇ ಸ್ಪಂದಿಸಿದ ಅವರು ರಾಜೇಶ್ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ.

ಅಭಿಮಾನಿಯ ಮೂವರು ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಂದೆ ರಾಜೇಶ್ ಹಾಸಿಗೆ ಹಿಡಿದ ನಂತರ ಹಿರಿಯ ಮಗ ಅರ್ಜುನ್, ಸ್ಥಳೀಯ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡಿ ಮನೆ ಖರ್ಚು ನಿಭಾಯಿಸುತ್ತಿದ್ದ. ಇದೀಗ ಈ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ನಟ ಮಹೇಶ್​ ಬಾಬು ತೆಗೆದುಕೊಂಡಿದ್ದಾರೆ.

Click 👇

https://newsnotout.com/2024/06/darshan-and-vijayalakshmi-court-issue-stay-order-against-media
https://newsnotout.com/2024/06/ramayana-stage-play-fine-due-to-misleading-content-and-parts
https://newsnotout.com/2024/06/alchohol-kannada-news-tamil-nadu-case-25-people-nomore
See also  ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ..! ರಸ್ತೆಗೆ ಉರುಳಿದ ಬೃಹತ್ ಬಂಡೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget