ನ್ಯೂಸ್ ನಾಟೌಟ್: ಐಪಿಎಲ್ ನಲ್ಲಿ(IPL 2025) ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ತಂಡವೆಂದರೆ ಅದು ಆರ್‌ಸಿಬಿ (RCB). ʼಈ ಸಲ ಕಪ್ ನಮ್ದೇʼ ಎನ್ನುವ ಘೋಷಣೆ ಪ್ರತಿ ವರ್ಷವೂ ಪ್ರತಿ ಅಭಿಮಾನಿಗಳ ಹೃದಯದಲ್ಲಿ ಮೊಳಗುತ್ತದೆ. ಆರ್‌ಸಿಬಿ ತಂಡದ ಅಭಿಮಾನಿಯೊಬ್ಬರು ಈ ಬಾರಿ ಟ್ರೋಫಿ ಗೆಲ್ಲದಿದ್ರೆ ತಾನು ಪತ್ನಿಗೆ ವಿಚ್ಛೇದನ ನೀಡುತ್ತೇನೆ ಎಂದು ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
“ಒಂದು ವೇಳೆ ಆರ್ ಸಿಬಿ ಈ ಸಲ ಟ್ರೋಫಿ ಗೆಲ್ಲದಿದ್ರೆ, ನಾನು ನನ್ನ ಪತ್ನಿಗೆ ಡಿವೋರ್ಸ್ ನೀಡುತ್ತೇನೆ” ಎಂದು ಹೇಳಿದ್ದಾರೆ.
ಈ ಬಾರಿ ಆರ್ ಸಿಬಿ ಟ್ರೋಫಿ ಗೆಲ್ಲದಿದ್ರೆ ಪತ್ನಿಗೆ ಡಿವೋರ್ಸ್ ಕೊಡುವುದಾಗಿ ಪತ್ನಿ ಮುಂದೆಯೇ ಅಭಿಮಾನಿಯಿಂದ ಚಾಲೆಂಜ್..! ಇಲ್ಲಿದೆ ವಿಡಿಯೋ https://t.co/Y1bvLbVaM1
— News Not Out (@News_Not_Out) May 8, 2025
ಈ ಮಾತನ್ನು ಹೇಳುವಾಗ ವ್ಯಕ್ತಿಯ ಪತ್ನಿ ಅವರ ಪಕ್ಕದಲ್ಲೇ ನಿಂತಿದ್ದರು. ಟ್ರೋಫಿ ಗೆಲ್ಲದಿದ್ರೆ ವಿಚ್ಛೇದನ ನೀಡುತ್ತೇನೆ ಇದು ನನ್ನ ಓಪನ್ ಚಾಲೆಂಜ್ ಎಂದು ಆರ್ ಸಿಬಿ ಅಭಿಮಾನಿ ಹೇಳಿದ್ದಾರೆ.