Uncategorized

ಆರ್ ಸಿಬಿ ತಂಡಕ್ಕೆ ಒತ್ತಡ ಹಾಕಿತೇ ಸಿದ್ದು ಸರ್ಕಾರ..? ಏನಿದು ಒತ್ತಡ..? ಬದಲಾಗುವುದೇ ಆರ್ ಸಿಬಿ..?

ನ್ಯೂಸ್ ನಾಟೌಟ್: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪ್ರತಿ ಸಲವೂ ಟ್ರೋಫಿ ಗೆಲ್ಲುವಲ್ಲಿ ಎಡವುತ್ತಿರುವ ಆರ್ ಸಿಬಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ಮೊದಲೇ ಶಾಕ್ ಎದುರಾಗಿದೆ.

ಆಂಗ್ಲ ಮಾಧ್ಯಮವೊಂದು ವರದಿ ಪ್ರಕಟಿಸಿರುವ ಪ್ರಕಾರ, ರಾಜ್ಯ ಸರ್ಕಾರವೇ ಇದೀಗ ಸ್ಥಳೀಯ ಆಟಗಾರರಿಗೆ ಅವಕಾಶ ನೀಡುವಂತೆ ಆರ್ ಸಿಬಿ ಫ್ರಾಂಚೈಸಿ ಮೇಲೆ ಒತ್ತಡ ಹೇರಿದೆ ಎಂದು ತಿಳಿದು ಬಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡಿಗರಿಗೆ ಅವಕಾಶ ನೀಡುತ್ತಿಲ್ಲ ಎಂಬ ಟೀಕೆಗಳು ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ. ಎಷ್ಟು ಟೀಕೆ ಎದುರಾದರೂ ಆರ್ ಸಿಬಿ ಫ್ರಾಂಚೈಸಿ ಮಾತ್ರ ಯಾವುದೇ ಬದಲಾವಣೆ ಮಾಡಿರಲಿಲ್ಲ. ಅದರಲ್ಲೂ ಕಳೆದ ಬಾರಿಯ ತಂಡದಲ್ಲಿದ್ದದ್ದು ಕರ್ನಾಟಕದ ಇಬ್ಬರು ಆಟಗಾರರು ಮಾತ್ರ.

ಇವರಲ್ಲಿ ವಿಜಯಕುಮಾರ್ ವೈಶಾಕ್ 4 ಪಂದ್ಯಗಳನ್ನಾಡಿದ್ದರು. ಮನೋಜ್ ಭಾಂಡಗೆ ಬೆಂಚ್ ಕಾದಿದ್ದರು. ಇತ್ತ ಮಹಾರಾಜ ಟಿ20 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಭಾಂಡಗೆ ತನ್ನ ಸಾಮರ್ಥ್ಯವನ್ನು ತೋರಿಸಿದ್ದರು. ಇದರ ಬೆನ್ನಲ್ಲೇ ಯುವ ಆಟಗಾರನನ್ನು ಇಡೀ ಸೀಸನ್​ನಲ್ಲಿ ಬೆಂಚ್ ಕಾಯಿಸಿದ ಆರ್​ಸಿಬಿ ಫ್ರಾಂಚೈಸಿಯ ನಡೆಯ ಬಗ್ಗೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದರು.

ಇದೀಗ ಐಪಿಎಲ್​ನ 18ನೇ ಆವೃತ್ತಿಗಾಗಿ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಸ್ಥಳೀಯ ಆಟಗಾರರಿಗೆ ಅವಕಾಶ ನೀಡುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜ್ಯ ಸರ್ಕಾರದ ಮೂಲಗಳು ಸೂಚಿಸಿವೆ ಎಂದು ವದಿಯಾಗಿದೆ.

Click

https://newsnotout.com/2024/10/cab-driver-kannada-news-viral-news-romance-viral-notice/

Related posts

ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಅಳವಡಿಸಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ಸುಳ್ಯದ ಯುವಕ ಸಿದ್ಧ- ಮಹಾರಾಷ್ಟ್ರಕ್ಕೆ ತೆರಳಲಿರುವ ನಾಲ್ಕೂರಿನ ಜೀವನ್ ಚತ್ರಪ್ಪಾಡಿ

ವಿಶ್ವದಲ್ಲೇ ಅತ್ಯಂತ ಉದ್ದದ ಮೂಗು ಹೊಂದಿದ್ದ ವ್ಯಕ್ತಿ ಈತ..!