Latestಕ್ರೀಡೆಕ್ರೀಡೆ/ಸಿನಿಮಾಕ್ರೈಂಬೆಂಗಳೂರುವೈರಲ್ ನ್ಯೂಸ್

ಆರ್ ​ಸಿಬಿ, ಸಿಎಸ್ ​ಕೆ ಪಂದ್ಯದ ವೇಳೆ ಕೇವಲ 1,200 ರೂಪಾಯಿಯ ಟಿಕೆಟ್ ಗಳನ್ನು ಬರೋಬ್ಬರಿ 10,000 ರೂಪಾಯಿಗೆ ಮಾರಾಟ..! 4 ಮಂದಿ ಅರೆಸ್ಟ್..!

583

ನ್ಯೂಸ್ ನಾಟೌಟ್: ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಐಪಿಎಲ್ ಪಂದ್ಯದ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹಣ ಗಳಿಸಲು ಕೆಲವರು ಮುಂದಾಗಿರುತ್ತಾರೆ. ಇದೇ ರೀತಿ ಅಕ್ರಮವಾಗಿ ಟಿಕೆಟ್ ಮಾರಾಟ ಮಾಡಿ ದುಡ್ಡು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಪಂದ್ಯದ ಟಿಕೆಟ್ ​ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಆರ್ ​ಸಿಬಿ- ಸಿಎಸ್ ​ಕೆ ನಡುವಿನ ಪಂದ್ಯದ 32 ಟಿಕೆಟ್ ​ಗಳು, ಮೊಬೈಲ್ ​ಗಳು ಹಾಗೂ 1 ಲಕ್ಷ ರೂಪಾಯಿ ನಗದನ್ನು ಸೀಜ್ ಮಾಡಲಾಗಿದೆ.

ಈ ನಾಲ್ವರು ಆರೋಪಿಗಳು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಹೈವೋಲ್ಟೇಜ್​ ಪಂದ್ಯದ ಟಿಕೆಟ್ ​ಗಳನ್ನು ಬ್ಲ್ಯಾಕ್ ​ನಲ್ಲಿ ಮಾರಾಟ ಮಾಡುತ್ತಿದ್ದರು. ಕೇವಲ 1,200 ರೂಪಾಯಿ ಮೂಲ ಬೆಲೆ ಇರೋ ಟಿಕೆಟ್​ಗಳನ್ನು ಬರೋಬ್ಬರಿ 10,000 ರೂಪಾಯಿಗೆ ಬ್ಲಾಕ್​ನಲ್ಲಿ ಮಾರುತ್ತಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸುತ್ತಿದ್ದ ಸಿಸಿಬಿ ಡಿಸಿಪಿ ಅಕಾಯ್ ಅಕ್ಷಯ್ ಮಚ್ಚೀಂದ್ರ ಹಾಗೂ ಅವರ ತಂಡದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸ್ಟೇಡಿಯಂ ಕೌಂಟರ್​​ ನಲ್ಲಿ ಟಿಕೆಟ್​ ವಿತರಣೆ ಸಮಯದಲ್ಲಿ ಟಿಕೆಟ್​ ಖರೀದಿ ಮಾಡುವ ನೆಪದಲ್ಲಿ ಆರೋಪಿಗಳು ಬರುತ್ತಿದ್ದರು. ಟಿಕೆಟ್ ​ಗಳನ್ನು ಖರೀದಿ ಮಾಡಿ ಅವೇ ಟಿಕೆಟ್ ​ಗಳನ್ನು ದುಪ್ಪಟ್ಟು ಬೆಲೆಗೆ ಪಂದ್ಯ ಆರಂಭವಾಗುವ ವೇಳೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ನಗ್ನವಾಗಿ ರಸ್ತೆಯಲ್ಲಿ ಓಡಾಡಿದ ಬೆಂಗಳೂರು ಪಿಜಿಯೊಂದರಲ್ಲಿ ವಾಸವಿರುವ ಯುವತಿ..! ಸಾರ್ವಜನಿಕರಿಂದ ಆಕ್ರೋಶ..!

ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಿದ್ದ CRPF​ ಯೋಧ ಸೇವೆಯಿಂದ ವಜಾ..! ವೀಸಾ ಅವಧಿ ಮುಗಿದಿದ್ದರೂ ಆಕೆಯನ್ನು ಭಾರತದಲ್ಲೇ ಬಚ್ಚಿಟ್ಟಿದ್ದ ಜವಾನ..!

ರಾಜ್ಯದಲ್ಲಿ ಇಂದು(ಮೇ.4) ನೀಟ್ ಪ್ರವೇಶ ಪರೀಕ್ಷೆ, ಅಭ್ಯರ್ಥಿಗಳು ಎತ್ತರದ ಚಪ್ಪಲಿ, ಕಿವಿಯೋಲೆ, ಬಳೆ, ಸರ, ಕಾಲ್ಗೆಜ್ಜೆ, ಮೂಗುತಿ, ಜಡೆ ಕ್ಲಿಪ್ ಸೇರಿ ಇನ್ನೂ ಹಲವು ವಸ್ತುಗಳನ್ನು ಧರಿಸುವಂತಿಲ್ಲ..!

See also  ಮೂಡಿಗೆರೆಯಲ್ಲಿ ಬಂಟ್ವಾಳ ವ್ಯಕ್ತಿಯನ್ನು ಪೆಟ್ರೋಲ್‌ ಸುರಿದು ಬರ್ಬರ ಹತ್ಯೆ! ಗಾಂಜಾ ಪೆಡ್ಲರ್‌ಗಳ ಕೃತ್ಯ ಶಂಕೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget