ಕರಾವಳಿಕ್ರೈಂವಿಡಿಯೋವೈರಲ್ ನ್ಯೂಸ್ಸಿನಿಮಾ

ಕೆ.ಜಿ.ಎಫ್ ನಟಿಯಿಂದ ಅಡ್ಡಾದಿಡ್ಡಿ ಕಾರು ಚಾಲನೆ..! ಹೊಡೆಯಬೇಡಿ ಎಂದು ಸಾರ್ವಜನಿಕರಲ್ಲಿ ಬೇಡಿಕೊಂಡ ರವೀನಾ ಟಂಡನ್..! ಇಲ್ಲಿದೆ ವೈರಲ್ ವಿಡಿಯೋ

254

ನ್ಯೂಸ್ ನಾಟೌಟ್: KGF ಸಿನಿಮಾ ಖ್ಯಾತಿಯ ಬಾಲಿವುಡ್‌ ನಟಿ ರವೀನಾ ಟಂಡನ್‌ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಶನಿವಾರ(ಮೇ.1) ತಡರಾತ್ರಿ ಮೂವರು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ನಟಿ ರವೀನಾ ಮದ್ಯ ಸೇವಿಸಿದ್ದರು ಎಂದೂ ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಜೂನ್ 1ರ ರಾತ್ರಿ ನಡೆದಿರುವ ರಸ್ತೆ ಅಪಘಾತದ ಘಟನೆಯಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ರ ಚಾಲಕ ಅಡ್ಡಾದಿಡ್ಡಿ ಚಾಲನೆ ಮಾಡಿ, ಮೂವರು ಮಹಿಳೆಯರಿಗೆ ಡಿಕ್ಕಿ ಹೊಡೆದಿರುವ ಘಟನೆ ಮುಂಬೈನ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯ ಬೆನ್ನಿಗೇ ಸಾರ್ವಜನಿಕರು ನಟಿ ರವೀನಾ ಟಂಡನ್ ಅವರ ಕಾರಿಗೆ ಮುತ್ತಿಗೆ ಹಾಕಿದ್ದಾರೆ.

ಘಟನೆಯ ನಂತರ ಕಾರಿನಿಂದ ಕೆಳಗಿಳಿದ ರವೀನಾ ಟಂಡನ್, ಗಾಯಾಳು ಮಹಿಳೆಯರಿಗೆ ಥಳಿಸಿದ್ದಾರೆ ಎಂದು ಗಾಯಾಳುಗಳ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಇದರಿಂದ ಕೆರಳಿರುವ ಸಾರ್ವಜನಿಕರು ಟಂಡನ್ ರನ್ನು ಬಾಯಿಗೆ ಬಂದಂತೆ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆ ವಿಡಿಯೊದಲ್ಲಿ, ನನಗೆ ಹೊಡೆಯಬೇಡಿ ಎಂದು ರವೀನಾ ಟಂಡನ್ ಬೇಡಿಕೊಳ್ಳುತ್ತಿರುವುದು ಸೆರೆಯಾಗಿದೆ. ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/06/delhi-cm-and-court-dismiss-the-request-for-bail
See also  ಪೊಲೀಸ್‌ ಇಲಾಖೆಯ 2,400 KSRP ಕಾನ್ ಸ್ಟೇಬಲ್ ಗಳ ನೇಮಕಕ್ಕೆ ಸರ್ಕಾರ ಆದೇಶ, ತುರ್ತು ಸಂದರ್ಭಗಳನ್ನು ನಿಭಾಯಿಸಲು ಬೆಟಾಲಿಯನ್ ಗಳ ತಯಾರಿಗೆ ಸಿದ್ಧತೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget