ಕ್ರೀಡೆ/ಸಿನಿಮಾವೈರಲ್ ನ್ಯೂಸ್ಸಿನಿಮಾ

ಸಾಯಿಪಲ್ಲವಿ ವಿರುದ್ಧ ‘ಬೈಕಾಟ್’ ಅಭಿಯಾನ ನಡೆಯುತ್ತಿರುವುದೇಕೆ..? ಏನಿದು ಬಾಲಿವುಡ್ ಪಿತೂರಿ..?

267

ನ್ಯೂಸ್ ನಾಟೌಟ್: ಬಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ (Sai Pallavi) ಸೀತಾ ಪಾತ್ರ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಸಾಕಷ್ಟು ನೆಟ್ಟಿಗರು ವಿರೋಧ ವ್ಯಕ್ತ ಪಡಿಸಿದ್ದರು. ಇದೊಂದು ಬಾಲಿವುಡ್ ಮಾಡುತ್ತಿರುವ ಪಿತೂರಿ ಅಂತಿದ್ದಾರೆ ನಟಿಯ ಫ್ಯಾನ್ಸ್. ದಕ್ಷಿಣ ಹುಡುಗಿಯರನ್ನು ಬಾಲಿವುಡ್ ಬಿಟ್ಟುಕೊಳ್ಳುವುದಿಲ್ಲ. ಹಾಗಾಗಿ ಬೈಕಾಟ್ (Boycott) ಎಂದು ಹಲವರು ಆರೋಪಿಸಿದ್ದಾರೆ.

ಈ ಹಿಂದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಂದಾಗ ಹಿಂದೂ ವಿರೋಧಿ ಹೇಳಿಕೆಯನ್ನು ಸಾಯಿ ಪಲ್ಲವಿ ನೀಡಿದ್ದರು. ಈ ಕಾರಣದಿಂದಾಗಿ ಭಾರೀ ವಿರೋಧವನ್ನು ಸೋಷಿಯಲ್ ಮೀಡಿಯಾದಲ್ಲಿ ಮಾಡಲಾಗುತ್ತಿದೆ. ಇದನ್ನು ಬಾಲಿವುಡ್ ಮೇಲೆ ಎತ್ತಿ ಹಾಕುವಂತಹ ಪ್ರಯತ್ನವನ್ನು ನಟಿಯ ಅಭಿಮಾನಿಗಳು ಮಾಡುತ್ತಿದ್ದಾರೆ. ಮೂರು ಪಾರ್ಟ್ ನಲ್ಲಿ ಈ ರಾಮಾಯಣ ಸಿನಿಮಾ ಮೂಡಿ ಬರಲಿದ್ದು, ಒಟ್ಟು ಬಜೆಟ್ ಎಷ್ಟು, ಯಾರಿಗೆ ಎಷ್ಟು ಸಂಭಾವನೆ ನೀಡಲಾಗಿದೆ, ಅತೀ ಹೆಚ್ಚು ಸಂಭಾವನೆ ಪಡೆದ ನಟ ಯಾರು ಹೀಗೆ ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.

ಅಧಿಕೃತವಾಗಿ ಚಿತ್ರತಂಡ ಹೇಳಿಕೊಳ್ಳದೇ ಇದ್ದರೂ, ನಟ, ನಟಿಯರು ಭರ್ಜರಿ ಸಂಭಾವನೆಯನ್ನೇ ಪಡೆದಿದ್ದಾರೆ ಎನ್ನಲಾಗಿದೆ. ರಾಮನ ಪಾತ್ರದಲ್ಲಿ ಮಿಂಚಲಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಬರೋಬ್ಬರಿ 75 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮೂರು ಪಾರ್ಟ್ ಸೇರಿ ಇವರಿಗೆ 225 ಕೋಟಿ ರೂಪಾಯಿ ಸಂದಾಯವಾಗಲಿದೆಯಂತೆ. ರಾವಣನ ಪಾತ್ರಧಾರಿ ಯಶ್ (Yash) ಮೂರೂ ಪಾರ್ಟ್ ಸೇರಿ 150 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ. ನಟಿ ಸಾಯಿ ಪಲ್ಲವಿ 18 ಕೋಟಿ ರೂಪಾಯಿ ನೀಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

See also  ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ..! ಪಂಚಾಯಿತಿ ಗ್ರಂಥಾಲಯದಲ್ಲಿ ವಿವಾದಾತ್ಮಕ ಬರಹ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget