ವೈರಲ್ ನ್ಯೂಸ್

ಹನುಮಾನ್ ಕಟೌಟ್ ಹಾಕಿ ಮಹಿಳಾ ದೇಹದಾರ್ಢ್ಯ; ಭಾರಿ ವಿವಾದಕ್ಕೆ ಕಾರಣವಾದ ಘಟನೆ

ನ್ಯೂಸ್ ನಾಟೌಟ್: ವೇದಿಕೆಯಲ್ಲಿ ಹನುಮಾನ್ ಕಟೌಟ್ ಪೋಟೋ ಹಾಕಿ ಮಹಿಳಾ ದೇಹದಾರ್ಢ್ಯ ಸ್ಪರ್ಧೆ ನಡೆಸಿ ಭಾರಿ ವಿವಾದಕ್ಕೆ ಕಾರಣವಾಗಿದೆ.

ಮಾ.4,5 ರಂದು ರತ್ಲಾಮ್ ನಲ್ಲಿ 13ನೇ ಮಹಿಳಾ ದೇಹದಾರ್ಢ್ಯ ಸ್ಪರ್ಧೆ ನಡೆಸಲಾಗಿತ್ತು. ಈ ಸ್ಪರ್ಧೆಯನ್ನು ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಮೋಹನ್ ಯಾದವ್ ಅವರು ಉದ್ಘಾಟನೆ ಮಾಡಿದ್ದರು. ವೇದಿಕೆಯಲ್ಲಿ ಹನುಮಾನ್ ಕಟೌಟ್ ಪೋಟೋದ ಮುಂದೆ ಮಹಿಳಾ ಬಾಡಿ ಬಿಲ್ಡರ್ಸ್ ಗಳು ಬಿಕಿನಿಯಂತಿರುವ ಉಡುಪುಗಳನ್ನು ಧರಿಸಿಕೊಂಡು ದೇಹದಾರ್ಢ್ಯ ಪ್ರದರ್ಶನವನ್ನು ಮಾಡಿರುವುದು ಅಸಭ್ಯ, ಆಶ್ಲೀಲವೆಂದು ಕಾಂಗ್ರೆಸ್ ಆರೋಪಿಸಿದೆ.

ಸ್ಪರ್ಧೆ ಬಳಿಕ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು ಗಂಗಾಜಲವನ್ನು ಸಿಂಪಡಿಸಿ ಶುದ್ಧಗೊಳಿಸಿದರು ಎಂಬ ಮಾಹಿತಿ ತಿಳಿದುಬಂದಿದೆ. ‘ಯಾರೆಲ್ಲಾ ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು ಅವರನ್ನು ಹನುಮಂತ ದೇವರು ಶಿಕ್ಷಿಸದೇ ಬಿಡುವುದಿಲ್ಲ’ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಮಯಾಂಕ್ ಜಾಟ್ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಹಿತೇಶ್ ಬಾಜಪೇಯಿ ‘ಮಹಿಳೆಯರು ಕ್ರೀಡೆಯಲ್ಲಿ ಸಾಧನೆ ಮಾಡುವುದನ್ನು ನೋಡುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ’ ಎಂದು ಹೇಳಿದ್ದಾರೆ.

Related posts

ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧಿಸಬೇಕು ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ಯಾರು? ಅರ್ಜಿದಾರರಿಗೆ ಹೈಕೋರ್ಟ್ ಹೇಳಿದ್ದೇನು?

ಹೆದ್ದಾರಿಯಲ್ಲಿ ಸತ್ತು ಬಿದ್ದಿದ್ದ ನಾಯಿಯನ್ನು ಎತ್ತಲು ಹೋದ ಯುವಕನ ದುರಂತ ಸಾವು..! ಏನಿದು ಮನಕಲಕುವ ಘಟನೆ..?

ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು..! 10 ಲಕ್ಷಕ್ಕೆ ‘ಸೆಟಲ್ ಮೆಂಟ್’ ಆರೋಪ..!