ಕರಾವಳಿ

ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ನಟಿ ರಶ್ಮಿಕಾ ಔಟ್

ನ್ಯೂಸ್ ನಾಟೌಟ್: ಸದಾ ಒಂದಿಲ್ಲೊಂದು ವಿಚಾರಕ್ಕೆ ಟ್ರೋಲ್ ಗೆ ಒಳಗಾಗುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.

ಕನ್ನಡ ಸಿನಿಮಾದಿಂದ ರಶ್ಮಿಕಾ ಬ್ಯಾನ್ ಮಾಡುವ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಪ್ರತಿಷ್ಠಿತ ಕಂಪನಿ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾರನ್ನ ಔಟ್ ಮಾಡಿದ್ದಾರೆ.‌ ಕನ್ನಡದ ಸಿನಿಮಾ ಮೂಲಕ ಬದುಕು ಆರಂಭಿಸಿ, ಇಂದು ನ್ಯಾಷನಲ್ ಸ್ಟಾರ್ ಆಗಿ ಮಿಂಚ್ತಿರುವ ಲಕ್ಕಿ ನಟಿ ರಶ್ಮಿಕಾಗೆ ಅದ್ಯಾಕೋ ಲಕ್ಕು ಕೈ ಕೊಟ್ಟಂತಿದೆ. ಇತ್ತೀಚೆಗೆ ತನ್ನ ವೃತ್ತಿ ಬದುಕಿನಲ್ಲಿ ಮೊದಲ ಹಿಟ್ ಸಿನಿಮಾ ನೀಡಿದ ನಿರ್ದೇಶಕ ರಿಷಬ್ ಶೆಟ್ಟಿ ತಂಡದವನ್ನು ಕಡೆಗಣಿಸಿದ್ದಾರೆ ಎಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಚಿತ್ರದ ನಿರ್ಮಾಣ ಸಂಸ್ಥೆ ಹೆಸರು ಹೇಳದಿರುವುದಕ್ಕೆ ನಟಿ ಕೆಟ್ಟದಾಗಿ ಟ್ರೋಲ್ ಕೂಡ ಆಗಿದ್ದರು. ಈ ಬೆನ್ನಲ್ಲೇ ಪುಷ್ಪ ನಟಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರತಿಷ್ಠಿತ ಆಭರಣ ಸಂಸ್ಥೆಯೊಂದು ಬ್ರ್ಯಾಂಡ್ ಅಂಬಾಸಿಡರ್ ಆಗಿ ರಶ್ಮಿಕಾ ಮಂದಣ್ಣ ಅವರನ್ನ ನೇಮಿಸಿಕೊಂಡಿತ್ತು. ಇದೀಗ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ವಜಾಗೊಳಿಸಿದ್ದಾರೆ. ನಟಿಯ ವಿವಾದಗಳಿಂದ ಕರ್ನಾಟಕ ಚಿತ್ರರಂಗ ಬ್ಯಾನ್ ಮಾಡಬೇಕು ಎಂಬ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಆಭರಣ ಸಂಸ್ಥೆಯು ರಶ್ಮಿಕಾರನ್ನ ಕೈಬಿಟ್ಟಿದೆ. ರಶ್ಮಿಕಾ ಅವರ ಬದಲು ನಟಿ ತ್ರಿಷಾ ಅವರನ್ನ ಕರೆತರಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ತನ್ನ ವೃತ್ತಿ ಸಾಧನೆಯಿಂದ ಕನ್ನಡ, ತೆಲುಗು ಬಳಿಕ ಹಿಂದಿಗೆ ಹಾರಿದ್ದ ರಶ್ಮಿಕಾ ಅವರ ವೃತ್ತಿ ಬದುಕಿನಲ್ಲಿ ಈಗ ಒಂದೊಂದೆ ಸಂಕಷ್ಟ ಎದುರಾಗುತ್ತಿದೆ.

Related posts

ಉಚಿತ ಕಾದ ಜನರಿಗೆ ಸಿಹಿ ಸುದ್ದಿ ಜುಲೈ 1 ರಿಂದ ವಿದ್ಯುತ್ ಬಿಲ್ ಫ್ರೀ , ಆಗಸ್ಟ್‌ನಿಂದ ಕರೆಂಟ್ ಬಿಲ್ ಪಾವತಿಸಬೇಕಿಲ್ಲ: ಸಿಎಂ ಸಿದ್ದು ಭರ್ಜರಿ ಘೋಷಣೆ

ಉಪ್ಪಿನಂಗಡಿ: ಬಲವಂತವಾಗಿ ಹಣದ ಕಟ್ಟು ದೋಚಿದ ಖದೀಮ! ಮಗಳ ಮದುವೆಗೆ ಚಿನ್ನ ಖರೀದಿಗೆ ಬರುವಾಗ ಬಂತು ಸಾವಿನ ಸುದ್ದಿ!

ಕೊಕ್ಕಡ: ಪ್ರಧಾನಿ ಮೋದಿಯವರ ಆಯುಷ್ಯ,ಆರೋಗ್ಯ ವೃದ್ಧಿಗಾಗಿ ವಿಶೇಷ ಹೋಮ