ಕರಾವಳಿಕೊಡಗು

ಕನ್ನಡ ಚಿತ್ರರಂಗದಿಂದ ಕಿರಿಕ್ ರಶ್ಮಿಕಾಗೆ ಗೇಟ್ ಪಾಸ್?

ನ್ಯೂಸ್ ನಾಟೌಟ್: ಕನ್ನಡ ಸಿನಿಮಾ ರಂಗದಿಂದ ಬೆಳೆದು ಪರಭಾಷಾ ಸಿನಿಮಾದಲ್ಲೇ ಹೆಚ್ಚು ನಟಿಸುತ್ತಿರುವ ಕೊಡಗಿನ ಬೆಡಗಿ ಕಿರಿಕ್ ರಶ್ಮಿಕಾ ಮಂದಣ್ಣಗೆ ಕನ್ನಡ ಸಿನಿಮಾ ರಂಗದಿಂದಲೇ ಗೇಟ್ ಪಾಸ್ ಸಿಗುವ ಸಾಧ್ಯತೆ ಇದೆ.

ಹೌದು, ಕಿರಿಕ್ ಪಾರ್ಟಿ ಸಿನಿಮಾದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಶ್ಮಿಕಾ ಅದೃಷ್ಟ ಅಲ್ಲಿಂದ ಖುಲಾಯಿಸಿತ್ತು. ಕನ್ನಡದಿಂದ ಬೆಳೆದರೂ ಕನ್ನಡ ಸಿನಿಮಾಗಳ ಬಗ್ಗೆ ಆಕೆ ತೋರಿದ ಅಸಡ್ಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹತ್ತಿದ ಏಣಿಯನ್ನೇ ಒದ್ದು ಕೈ ಸನ್ನೆಗಳನ್ನು ಮಾಡುವ ಮೂಲಕ ರಿಷಭ್‌ ಶೆಟ್ರಿಗೆ ಅವಮಾನ ಮಾಡುವಷ್ಟರ ಮಟ್ಟಿಗೆ ಬೆಳೆದಿರುವ ಆಕೆಯ ಮೇಲೆ ರಿಷಭ್ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. ಈಗ ಪರಭಾಷಾ ಸಿನಿಮಾಗಳಲ್ಲಿ ಮೆರೆಯುತ್ತಿರುವ ಆಕೆಗೆ ಸರಿಯಾಗಿ ಬುದ್ದಿ ಕಲಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಆಕೆಯನ್ನು ಕನ್ನಡ ಸಿನಿಮಾ ರಂಗದಿಂದ ಬ್ಯಾನ್ ಮಾಡಬೇಕು ಹಾಗೂ ಆಕೆಯ ಸಿನಿಮಾಗಳನ್ನು ನೋಡಬಾರದು ಎಂದು ಹಿಗ್ಗಾಮುಗ್ಗಾ ರಿಷಭ್‌ ಫ್ಯಾನ್ಸ್‌ ಜಾಡಿಸಿದ್ದಾರೆ.

Related posts

ಸಂಪಾಜೆ- ಕಲ್ಲುಗುಂಡಿ: ಪಯಸ್ವಿನಿ ನದಿ ಹೂಳೆತ್ತುವ ಸಮೀಕ್ಷೆ ಆರಂಭ

ಭರ್ಜರಿ ಗೆಲುವಿಗೆ ಸಿಹಿ ಹಂಚಿ ಸಂಭ್ರಮಿಸಿದ ಖರ್ಗೆ

ಸುಳ್ಯ: ಕೊಡಗಿನ ನೆಲ್ಯಹುದಿಕೇರಿಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ..!ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ