ಕ್ರೀಡೆ/ಸಿನಿಮಾ

ಕನ್ನಡ ಸಿನಿಮಾ ಬೆಂಬಲಕ್ಕೆ ನಿಂತ ರಶ್ಮಿಕಾ ಮಂದಣ್ಣ..!ಹಾಸ್ಯ ನಟ ಚಿಕ್ಕಣ್ಣ “ಉಪಾಧ್ಯಕ್ಷ”ನಿಗೆ ರಶ್ಮಿಕಾ ಸಾಥ್..!

ನ್ಯೂಸ್‌ ನಾಟೌಟ್‌ :  ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೇ ಕಿರಿಕ್ ಪಾರ್ಟಿ ಚಿತ್ರದ ಮೂಲಕ.ಬಳಿಕ ಕೆಲವೇ ಕೆಲವು ಚಿತ್ರಗಳ ಮೂಲಕ ಕಾಣಿಸಿಕೊಂಡ ಅವರು ಬಳಿಕ ತೆಲುಗು,ತಮಿಳು ಸೇರಿದಂತೆ ಬಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ.ಮತ್ತೆ ಅವರು ಕನ್ನಡದತ್ತ ಮುಖ ಮಾಡಲೇ ಇಲ್ಲ. ಕೆಲವರು ಇವರಿಗೆ ಕನ್ನಡ ನಾಡಲ್ಲಿ ಹುಟ್ಟಿದವರು, ಕನ್ನಡವನ್ನೇ ಸರಿಯಾಗಿ ಮಾತನಾಡಲಾಗುತ್ತಿಲ್ಲವೆಂದು ಟೀಕೆ ಮಾಡಿದ್ರು.ಇದರ ಬೆನ್ನಲ್ಲೇ ಇದೀಗ ಚಿಕ್ಕಣ್ಣ ನಟನೆಯ ಬಹುನಿರೀಕ್ಷಿತ ಉಪಾಧ್ಯಕ್ಷ ಚಿತ್ರಕ್ಕೆ ನ್ಯಾಷನಲ್‌ ಕ್ರಶ್‌ ಸಾಥ್‌ ನೀಡಿದ್ದಾರೆ. ಚಿತ್ರವನ್ನು ನೋಡುವಂತೆ ಸಿನಿ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತ ವಿಡಿಯೋವನ್ನು ಉಪಾಧ್ಯಕ್ಷ ಟೀಂ ಹಂಚಿಕೊಂಡಿದೆ.ಬಹಳ ದಿನಗಳ ನಂತರ ಒಂದು ಕನ್ನಡ ಸಿನಿಮಾಗೆ ರಶ್ಮಿಕಾ ಸಪೋರ್ಟ್‌ ಮಾಡಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. 

ಹಾಸ್ಯ ನಟ ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಉಪಾಧ್ಯಕ್ಷ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಸಾಥ್ ಕೊಟ್ಟಿದ್ದಾರೆ. ಬಹು ದಿನಗಳ ನಂತರ ಕನ್ನಡದ ಸಿನಿಮಾವೊಂದಕ್ಕೆ ಬೆಂಬಲವಾಗಿ ನಿಂತು ಕನ್ನಡದಲ್ಲೇ ಗುಡ್ ಲಕ್ ಹೇಳಿರುವ ರಶ್ಮಿಕಾ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ ಟ್ರೋಲ್‌ ಸಹ ಮಾಡಲಾಗುತ್ತಿದೆ.

ಇನ್ನು ‘ಉಪಾಧ್ಯಕ್ಷ’ ಸಿನಿಮಾ ಮುಂದಿನ ವಾರ ತೆರೆ ಕಾಣಲಿದೆ. ಈ ಚಿತ್ರವನ್ನು ‘ದಿಲ್‌ವಾಲಾ’ ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶಿಸಿದ್ದಾರೆ. ಕಾಮಿಡಿ ಎಂಟರ್‌ಟೈನರ್ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ. ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

Related posts

ವಿಶ್ವಕಪ್ ಅಂಧರ ಟಿ೨೦ ಕ್ರಿಕೆಟ್‌ಗೆ ವೇದಿಕೆ ಸಜ್ಜು, ಡಿ.೫ರಿಂದ ಮಹಾ ಸಮರ

ಸುಳ್ಯ: ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ, ಅತ್ಯುತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿಗಳು

ಹಿರಿಯ ಹಾಸ್ಯ ಕಲಾವಿದ ಮಂದೀಪ್ ರಾಯ್ ಇನ್ನಿಲ್ಲ, ತಡರಾತ್ರಿ ಹೃದಯಾಘಾತದಿಂದ ವಿಧಿವಶ