Latestಕ್ರೈಂವೈರಲ್ ನ್ಯೂಸ್ಸಿನಿಮಾ

ರಶ್ಮಿಕಾ ಮಂದಣ್ಣಗೆ ಟೀಕೆ ಮಾಡಿದ್ದ ಶಾಸಕನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು..! ಪ್ರಚಾರಕೋಸ್ಕರ ಪತ್ರ ಬರೆದಿರಬಹುದು ಎಂದ ಶಾಸಕ..!

710
Spread the love

ನ್ಯೂಸ್ ನಾಟೌಟ್: ನಟಿ ರಶ್ಮಿಕಾ ಮಂದಣ್ಣಗೆ ಶಾಸಕ ರವಿ ಗಣಿಗ ಟೀಕಿಸಿದ್ದರ ಹಿನ್ನೆಲೆ ಅವರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ರಶ್ಮಿಕಾ ಮಂದಣ್ಣಗೆ ಭಯ ಹುಟ್ಟಿಸಲಾಗಿದೆ ಎಂದು ರವಿ ಗಣಿಗ ವಿರುದ್ಧ ಮಹಿಳಾ ಆಯೋಗಕ್ಕೆ ಕೊಡವ ಸಂಘಟನೆಯಿಂದ ಪತ್ರ ಬರೆಯಲಾಗಿದೆ.

ಮತ್ತೆ ರಶ್ಮಿಕಾ ವಿರುದ್ಧ ರವಿ ಗಣಿಗ ನಾಲಿಗೆ ಹರಿಬಿಟ್ಟಿದ್ದಕ್ಕೆ ಕೊಡವ ಸಂಘಟನೆ ನಟಿಯ ಬೆನ್ನಿಗೆ ನಿಂತಿದೆ ಎನ್ನಲಾಗಿದೆ. ರಶ್ಮಿಕಾ ಅವರನ್ನು ಬೆದರಿಸಿ ಭಯ ಹುಟ್ಟಿಸಲಾಗಿದೆ. ಅವರು ಅತಿಸೂಕ್ಷ್ಮ ಬುಡಕಟ್ಟು ಸಮುದಾಯದವರಾಗಿದ್ದಾರೆ. ಅವರನ್ನು ಬೆದರಿಸುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಹಾಗಾಗಿ ಶಾಸಕನ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೊಡವ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ನಾಚಪ್ಪ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಚಿತ್ಸೋತ್ಸವಕ್ಕೆ ಕರೆದರೆ ರಶ್ಮಿಕಾ ಟೈಮ್ ಇಲ್ಲ ಅಂತಾರೆ ಎಂದು ನಟಿಯ ವಿರುದ್ಧ ರವಿ ಗಣಿಗ ಕೆಂಡಕಾರಿದ್ದರು. ಈ ಬೆನ್ನಲ್ಲೇ ನಟಿಗೆ ಭದ್ರತೆ ಬೇಕು ಅಂತ ಕೊಡವ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಈ ವಿಚಾರವಾಗಿ ರವಿ ಗಣಿಗ ಮತ್ತೆ ಪತ್ರಿಕ್ರಿಯೆ ನೀಡಿದ್ದರು. ಇನ್ನೂ ಪ್ರಚಾರಕೋಸ್ಕರ ನಾಚಪ್ಪ ಪತ್ರ ಬರೆದಿರಬಹುದು. ಅದಕ್ಕೆ ಜಾಸ್ತಿ ಮನ್ನಣೆ ಕೊಡೋ ಅವಶ್ಯಕತೆಯಿಲ್ಲ ಎಂದು ವಿಧಾನಸೌಧದಲ್ಲಿ ಶಾಸಕ ಹೇಳಿಕೆ ನೀಡಿದ್ದರು.

See also  ರಾತ್ರಿ ಕಸದ ಲಾರಿ ಮತ್ತು ಬೈಕ್ ನಡುವೆ ಅಪಘಾತ,ಯುವಕ - ಯುವತಿ ಸಾವು..! ಲಾರಿ ಚಾಲಕನನ್ನು ನಾನೇ ಕೊಲೆ ಮಾಡುವೇ ಎಂದ ಯುವಕನ ತಂದೆ..!
  Ad Widget   Ad Widget   Ad Widget   Ad Widget