ಕೊಡಗುಕ್ರೈಂವಿಡಿಯೋವೈರಲ್ ನ್ಯೂಸ್

ರಶ್ಮಿಕಾ ಮಂದಣ್ಣ ಬಳಿಕ ಕತ್ರಿನಾಗೂ ಸಂಕಷ್ಟ..! ಸಿನಿಮಾ ದೃಶ್ಯವನ್ನು ಎಡಿಟ್ ಮಾಡಿದ್ಯಾರು?

165

ನ್ಯೂಸ್ ನಾಟೌಟ್ : ಕಳೆದ ಕೆಲ ದಿನಗಳಿಂದ ಸಿನಿಮಾರಂಗದಲ್ಲಿ ಸದ್ದು ಮಾಡುತ್ತಿರುವ ಡೀಪ್‌ ಫೇಕ್‌ ವಿಡಿಯೋದಿಂದ ನಟಿ ರಶ್ಮಿಕಾ ಮಂದಣ್ಣ ಬೇಸರ ವ್ಯಕ್ತಪಡಿಸಿದ್ದರು ಜೊತೆಗೆ ಎಡಿಟರ್ ಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ಬೆನ್ನಲ್ಲೆ ಮತ್ತೊಬ್ಬ ನಟಿಗೆ ನಕಲಿ ಫೋಟೋ ಸಂಕಷ್ಟ ಎದುರಾಗಿದೆ.

ರಶ್ಮಿಕಾ ಮಂದನ ಪರ ಅಮಿತಾಬ್ ಬಚ್ಚನ್ ಹಾಗು ಹೆಚ್ಚಿನ ಚಿತ್ರರಂಗದ ಕಲಾವಿದರು ಬೆಂಬಲಕ್ಕೆ ನಿಂತಿದ್ದರು. ಬ್ರಿಟಿಷ್‌ – ಇಂಡಿಯನ್‌ ಸೋಶಿಯಲ್‌ ಮೀಡಿಯಾ ತಾರೆ ಝಾರ ಪಟೇಲ್‌ ಅವರ ವಿಡಿಯೋಗೆ ರಶ್ಮಿಕಾ ಅವರ ಮುಖವನ್ನು ಜೋಡಿಸಿ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಮಾಡಲಾಗಿತ್ತು.

ಇದೀಗ ಮತ್ತೊಬ ನಟಿ ಎಐ ತಂತ್ರಜ್ಞಾನದ ದುರುಪಯೋಗದ ಬಲೆಯಲ್ಲಿ ಸಿಲುಕಿದ್ದಾರೆ. ಬಿಟೌನ್‌ ಬ್ಯೂಟಿ ಕತ್ರಿನಾ ಕೈಫ್‌ ಸಿನಿಮಾದ ಫೋಟೋವೊಂದನ್ನು ಮಾರ್ಫಿಂಗ್‌ ಮಾಡಿ ವೈರಲ್‌ ಮಾಡಲಾಗಿದೆ.

ಸಲ್ಮಾನ್‌ ಖಾನ್‌ ʼಟೈಗರ್-3‌ʼ ಸಿನಿಮಾದಲ್ಲಿ ನಟಿ ಕತ್ರಿನಾ ಕೈಫ್‌ ಟವೆಲ್ ಹಾಕಿಕೊಂಡು ಪೈಟ್‌ ಮಾಡುವ ದೃಶ್ಯವೊಂದಿದೆ. ಈ ದೃಶ್ಯವನ್ನು ಟ್ರೇಲರ್‌ ನಲ್ಲಿ ತೋರಿಸಲಾಗಿದೆ. ಈ ದೃಶ್ಯದ ಸ್ಕ್ರೀನ್‌ ಶಾಟ್‌ ನ್ನು ಬಳಸಿಕೊಂಡು ಅದನ್ನು ಡೀಪ್‌ ಫೇಕ್‌ ಫೋಟೋವನ್ನಾಗಿ ಮಾರ್ಫ್‌ ಮಾಡಲಾಗಿದ್ದು, ಪೋಟೋವನ್ನು ಎಐ ತಂತ್ರಜ್ಞಾನದ ಮೂಲಕ ಅಸಭ್ಯ ರೀತಿ ಮಾರ್ಫಿಂಗ್ ಮಾಡಿ ವೈರಲ್‌ ಮಾಡಲಾಗಿದೆ.

ಆ ಬಳಿಕ ಸೋಶಿಯಲ್‌ ಮೀಡಿಯಾದಿಂದ ಆ ಫೋಟೋವನ್ನು ಡಿಲೀಟ್‌ ಮಾಡಲಾಗಿದೆ. ಸದ್ಯ ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಕ್ರಮಕ್ಕೆ ಆಗ್ರಹಿಸಲಾಗಿದೆ.

See also  ಮಡಿಕೇರಿ: ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ,ಕಣ್ಮನ ಸೆಳೆಯುತ್ತಿರುವ ಹೂಗಳ ರಾಶಿ
  Ad Widget   Ad Widget     Ad Widget   Ad Widget   Ad Widget   Ad Widget