ದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಸೈಬರ್ ಕ್ರೈಂ ಸಮನ್ವಯ ಕೇಂದ್ರಕ್ಕೆ ರಶ್ಮಿಕಾ ಮಂದಣ್ಣ ರಾಷ್ಟ್ರೀಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ..! ಈ ಬಗ್ಗೆ ನಟಿ ಹೇಳಿದ್ದೇನು..?

242

ನ್ಯೂಸ್ ನಾಟೌಟ್ : ದೇಶದಲ್ಲಿ ಸೈಬರ್ ಅಪರಾಧಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕೇಂದ್ರದ ಗೃಹ ಸಚಿವಾಲಯ ಆರಂಭಿಸಿರುವ ಭಾರತದ ಸೈಬರ್ ಅಪರಾಧಗಳ ಸಮನ್ವಯ ಕೇಂದ್ರದ(ಐ4ಸಿ) ರಾಷ್ಟ್ರೀಯ ಬ್ರಾಂಡ್ ಅಬಾಸಿಡರ್ ಆಗಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರನ್ನು ನೇಮಕ ಮಾಡಲಾಗಿದೆ.

ಕಿರಿಕ್ ಪಾರ್ಟಿ, ಪುಷ್ಪ, ಡಿಯರ್ ಕಾಮ್ರೇಡ್, ಅನಿಮಲ್ ಮುಂತಾದ ಹಿಟ್ ಚಿತ್ರಗಳ ಮೂಲಕ ಹೆಸರುವಾಸಿಯಾಗಿರುವ ರಶ್ಮಿಕಾ ಅವರ ಡೀಪ್‌ಫೇಕ್ ವಿಡಿಯೊವೊಂದು ಈ ವರ್ಷದ ಆರಂಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ಈ ಕುರಿತಂತೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ರಶ್ಮಿಕಾ, ‘ಕೆಲ ತಿಂಗಳ ಹಿಂದೆ ನನ್ನ ಡೀಪ್‌ಫೇಕ್ ವಿಡಿಯೊವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಆ ಘಟನೆ ಬಳಿಕ ಸೈಬರ್ ಅಪರಾಧಗಳ ವಿರುದ್ಧ ನಿಲುವು ತೆಗೆದುಕೊಳ್ಳಲು ಮತ್ತು ಆ ಕುರಿತಂತೆ ಜಾಗೃತಿ ಮೂಡಿಸಲು ನಿರ್ಧರಿಸಿದೆ. ಇದಕ್ಕೆ ಭಾರತ ಸರ್ಕಾರದ ಸಾಥ್ ಸಿಕ್ಕಿರುವುದನ್ನು ಘೋಷಿಸಲು ಅತ್ಯಂತ ಸಂತೋಷವಾಗುತ್ತಿದೆ. ಕೇಂದ್ರದ ಗೃಹ ಸಚಿವಾಲಯ ಆರಂಭಿಸಿರುವ ಭಾರತದ ಸೈಬರ್ ಅಪರಾಧಗಳ ಸಮನ್ವಯ ಕೇಂದ್ರದ(ಐ4ಸಿ) ರಾಷ್ಟ್ರೀಯ ಬ್ರಾಂಡ್ ಅಬಾಸಿಡರ್ ಆಗಿ ನನ್ನನ್ನು ನೇಮಕ ಮಾಡಲಾಗಿದೆ. ಸೈಬರ್ ಕ್ರಿಮಿನಲ್‌ಗಳು ಭಿನ್ನ ರೀತಿಯಲ್ಲಿ ಪ್ರತಿಯೊಬ್ಬರನ್ನೂ ಟಾರ್ಗೆಟ್ ಮಾಡುತ್ತಾರೆ. ಕೇವಲ ಜಾಗೃತರಾಗಿದ್ದರೆ ಸಾಲದು. ಇವುಗಳಿಂದ ನಮ್ಮನ್ನ ನಾವು ರಕ್ಷಣೆ ಮಾಡಿಕೊಳ್ಳಬೇಕು. ಅದನ್ನು ನಿಗ್ರಹಿಸುವತ್ತಲೂ ಗಮನ ಹರಿಸಬೇಕಿದೆ. ಐ4ಸಿ ಅಂಬಾಸಿಡರ್ ಆಗಿ ನಾನು ನಿಮ್ಮನ್ನು ಸೈಬರ್ ಅಪರಾಧಗಳ ಬಗ್ಗೆ ಜಾಗೃತರಾಗಿರಿಸುತ್ತಿರುತ್ತೇನೆ. ಎಲ್ಲರೂ ಒಟ್ಟಾಗಿ ಭಾರತವನ್ನು ಸೈಬರ್ ಅಪರಾಧಗಳಿಂದ ಮುಕ್ತಗೊಳಿಸೋಣ’ಎಂದು ರಶ್ಮಿಕಾ ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 4.42 ಕೋಟಿ ಅನುಯಾಯಿಗಳು, ಎಕ್ಸ್‌ನಲ್ಲಿ 49 ಲಕ್ಷ ಅನುಯಾಯಿಗಳನ್ನು ಹೊಂದಿರುವ ರಶ್ಮಿಕಾ, 1930ಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಸೈಬರ್ ಅಪರಾಧಗಳ ಬಗ್ಗೆ ವರದಿ ಮಾಡುವಂತೆ ಮನವಿ ಮಾಡಿದ್ದಾರೆ.
‘ಐ4ಸಿಯ ರಾಷ್ಟ್ರೀಯ ಬ್ರಾಂಡ್ ಅಂಬಾಸಿಡರ್ ಆಗಿ ಪ್ಯಾನ್ ಇಂಡಿಯಾ ತಾರೆ ರಶ್ಮಿಕಾ ಅವರನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ. ನಾವು ಭಾರತದ ಡಿಜಿಟಲ್ ಲ್ಯಾಂಡ್‌ಸ್ಕೇಪ್ ಅನ್ನು ಬಲಪಡಿಸಲು ಒಟ್ಟಾಗುತ್ತಿದ್ದೇವೆ, ನಾವು ಸೈಬರ್ ಅಪರಾಧಗಳನ್ನು ನೇರ ನಿಭಾಯಿಸುತ್ತೇವೆ’ಎಂದು ಕೇಂದ್ರದ ಗೃಹ ಸಚಿವಾಲಯ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.

Click

https://newsnotout.com/2024/10/kerala-and-karnataka-conversion-issue-viral-news/
https://newsnotout.com/2024/10/darshan-thugudeepa-case-bail-issue-highcourt-appeal/
https://newsnotout.com/2024/10/dr-puneethrajkumar-kannada-news-sports-and-scam/
https://newsnotout.com/2024/10/school-teacher-attempt-to-harm-kannada-news-bengaluru/
https://newsnotout.com/2024/10/kannada-news-bengaluru-animal-kananda-news-m/
https://newsnotout.com/2024/10/coconut-tree-kannada-news-photo-viral-sayuktha-hegade/
See also  ಪುಷ್ಪಾ 2 ನಟ ಅಲ್ಲು ಅರ್ಜುನ್ ಅರೆಸ್ಟ್..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget