Latestವಿಡಿಯೋವೈರಲ್ ನ್ಯೂಸ್ಸಿನಿಮಾ

ಆಕೆಗೂ ನನಗೂ 31 ವರ್ಷದ ಅಂತರವಿದೆ ಅದರಿಂದ ನಿಮಗೇನು ಸಮಸ್ಯೆ ಎಂದ ಸಲ್ಮಾನ್ ಖಾನ್..! ರಶ್ಮಿಕಾ ಮತ್ತು ಸಲ್ಮಾನ್ ನಡುವಿನ ವಯಸ್ಸಿನ ಅಂತರಕ್ಕೆ ಟ್ರೋಲ್..!

855

ನ್ಯೂಸ್‌ ನಾಟೌಟ್: ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಚಿತ್ರ ಮಾ.30ರಂದು ರಿಲೀಸ್‌ ಗೆ ತಯಾರಾಗಿದೆ. ಸದ್ಯ ಮುಂಬೈನಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಸಮಾರಂಭ ಅದ್ಧೂರಿಯಾಗಿ ಜರುಗಿದೆ. ಈ ವೇಳೆ, ರಶ್ಮಿಕಾ ಜೊತೆಗಿನ ವಯಸ್ಸಿನ ಅಂತರದ ಬಗ್ಗೆ ಸಲ್ಮಾನ್‌ ರನ್ನು ಟ್ರೋಲ್ ಮಾಡಿದ್ದರ ಬಗ್ಗೆ ಪ್ರಶ್ನೆಗೆ ಸಲ್ಮಾನ್ ಉತ್ತರಿಸಿದ್ದಾರೆ.

ನನಗೆ ಅವರಿಗೂ(ರಶ್ಮಿಕಾ) 31 ವರ್ಷ ಅಂತರವಿದೆ ನಿಜ. ಆದರೆ ಆಕೆಯ ಅಪ್ಪನಿಗೆ ಏನು ತೊಂದರೆ ಇಲ್ಲ ಮತ್ಯಾಕೆ ನಿಮಗೆ ಸಮಸ್ಯೆ ಎಂದು ಖಡಕ್ ಆಗಿ ಸಲ್ಮಾನ್ ಮಾತನಾಡಿದ್ದಾರೆ.

ಮಗಳ ವಯಸ್ಸಿನ ನಾಯಕಿ ಜೊತೆ ರೊಮ್ಯಾನ್ಸ್ ಮಾಡ್ತಿದ್ದೀರಾ ಎಂದು ಸಲ್ಮಾನ್‌ಗೆ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

‘ಸಿಕಂದರ್’ ಸಿನಿಮಾಗೆ ‘ಪುಷ್ಪ 2’ ನಟಿ ನಾಯಕಿ ಎನ್ನುತ್ತಿದ್ದಂತೆ ಸಲ್ಮಾನ್ ಮತ್ತು ರಶ್ಮಿಕಾ ವಯಸ್ಸಿನ ಬಗ್ಗೆ ಚರ್ಚೆ ನಡೆದಿತ್ತು. ಸಲ್ಮಾನ್‌ ಗಿಂತ ರಶ್ಮಿಕಾ 31 ವರ್ಷ ಚಿಕ್ಕವರು. ಹಾಗಾಗಿ ಸಹಜವಾಗಿ ಸಲ್ಮಾನ್ ಟೀಕೆಗೆ ಗುರಿಯಾಗಿದ್ರು.

 

View this post on Instagram

 

A post shared by Manav Manglani (@manav.manglani)

ಮಾತು ಮುಂದುವರಿಸಿದ ಸಲ್ಮಾನ್, ರಶ್ಮಿಕಾಗೆ ನಾಳೆ ಮದುವೆಯಾಗ್ತಾರೆ, ಮುಂದೆ ಮಕ್ಕಳಾಗುತ್ತೆ, ಆಗಲೂ ಕೂಡ ಅವರಿಗೆ ಚಿತ್ರರಂಗದಲ್ಲಿ ಕೆಲಸ ಮಾಡಲು ಅವರ ಪತಿಯಿಂದ ಅನುಮತಿ ಸಿಗುತ್ತೆ ಎಂದು ಭಾವಿಸಿದ್ದೇನೆ ಎಂದು ಸಲ್ಮಾನ್ ಹೇಳಿದ್ದಾರೆ. ಸಲ್ಮಾನ್ ಖಾನ್ ಅವರ ಈ ಮಾತಿಗೆ ಹೌದು ಎಂದು ರಶ್ಮಿಕಾ ಹಿಂದೆ ನಿಂತು ತಲೆಯಾಡಿಸಿದ್ದಾರೆ.

ಇದನ್ನೂ ಓದಿ:  ಲಾಂಗ್‌ ಹಿಡಿದು ರೀಲ್ಸ್ ಮಾಡಿದ್ದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳು..! ರಜತ್‌, ವಿನಯ್‌ ವಿರುದ್ಧ ದೂರು ದಾಖಲು..!

See also  ಅಪರೂಪದ ವಿಚಿತ್ರ ಮೊಟ್ಟೆ 21,000 ರೂ. ಗೆ ಹರಾಜು..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget