ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಮತ್ತೊಬ್ಬ ತೆಲುಗು ನಟನ ಜೊತೆ ʼಕೊಡಗಿನ ಬೆಡಗಿಯ ಡೇಟಿಂಗ್‌ʼ..! ರಶ್ಮಿಕಾ ಬಗ್ಗೆ ನಟ ಹೇಳಿದ್ದೇನು?

ನ್ಯೂಸ್‌ನಾಟೌಟ್‌: ಭಾರತೀಯ ಸಿನಿ ರಂಗದ ನಟಿ ರಶ್ಮಿಕಾ ಕುರಿತು ಮತ್ತೊಂದು ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಟಾಲಿವುಡ್‌ ನ ಖ್ಯಾತ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ ನ್ಯಾಷುನಲ್‌ ಕ್ರಶ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿದೆ.

ರಾಜಮೌಳಿ ನಿರ್ದೇಶನದ ಛತ್ರಪತಿ ಚಿತ್ರವನ್ನು ಅದೇ ಹೆಸರಿನಲ್ಲಿ  ಹಿಂದಿಯಲ್ಲಿ ರಿಮೇಕ್ ಮಾಡಲಾಗುತ್ತಿದ್ದು, ಪ್ರಭಾಸ್ ಪಾತ್ರದಲ್ಲಿ ಸಾಯಿ ಶ್ರೀನಿವಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ಸಾಯಿ ಶ್ರೀನಿವಾಸ್ ಅಭಿನಯದ ಹಲವು ಸಿನಿಮಾಗಳು ಹಿಂದಿಗೆ ಡಬ್ ಆಗುವ ಮೂಲಕ ಯೂಟ್ಯೂಬ್ ನಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿರುವ ಹಿನ್ನೆಲೆಯಲ್ಲಿ ಪೆನ್ ಸ್ಟುಡಿಯೋಸ್ ಛತ್ರಪತಿ ರಿಮೇಕ್ ನಿರ್ಮಾಣಕ್ಕೆ ಮುಂದಾಗಿದೆ ಎನ್ನಲಾಗಿದೆ.

ಇನ್ನು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಈ ಸುದ್ದಿ ಕುರಿತು ಪ್ರತಿಕ್ರಿಯಿಸಿದ್ದು, ಮೇ 12 ರಂದು ಹಿಂದಿ ಚಿತ್ರ ಛತ್ರಪತಿ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದೆ.

ಅದಕ್ಕಾಗಿಯೇ ಶ್ರೀನಿವಾಸ್ ಬಾಲಿವುಡ್‌ನ ಮಾಧ್ಯಮ ಸಂಸ್ಥೆಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ರಶ್ಮಿಕಾ ಡೇಟಿಂಗ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವಿಬ್ಬರೂ ಒಮ್ಮೆ ಭೇಟಿಯಾಗಿದ್ದೇವೆ. ಡೇಟಿಂಗ್ ಅದೇಲ್ಲ ಸುಳ್ಳು ಸುದ್ದಿ, ನಾವಿಬ್ಬರು ಒಳ್ಳೆಯ ಸ್ನೇಹಿತರು ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.  ನಟ ನಟಿಯರು ಜಸ್ಟ್‌ ಒಂದು ಫೋಟೋಗೆ ಪೋಸ್‌ ಕೊಟ್ಟರೆ ಸಾಕು ನೆಟ್ಟಿಗರು ಅಲ್ಲೊಂದು ಹೊಸ ಕಥೆ ಕಟ್ಟುತ್ತಾರೆ, ಇದೀಗ ಇಲ್ಲೂ ಅದೇ ಆಗಿದೆ.

Related posts

ಅಮೆರಿಕದ ಶ್ವೇತಭವನದ ಮೇಲೆ ಬೃಹತ್ ಟ್ರಕ್ ಮೂಲಕ ದಾಳಿಗೆ ಯತ್ನಿಸಿದ್ದ ಭಾರತ ಮೂಲದ ಯುವಕ..! 8 ವರ್ಷ ಜೈಲು..!

ನಟಿ ಸೌಂದರ್ಯ 100 ಕೋಟಿ ಆಸ್ತಿ ರಹಸ್ಯ..! ಇಷ್ಟೊಂದು ಆಸ್ತಿ ಯಾರ ಪಾಲಾಯ್ತು?

ನಿಮ್ಮ ಬಳಿಯೂ ಈ ನಾಣ್ಯಗಳಿದ್ದರೆ ನೀವು ಲಕ್ಷಾಧಿಪತಿಗಳಾಗಬಹುದು! ಮಾರಾಟ ಮಾಡುವುದು ಹೇಗೆ? ಯಾರು ಇದನ್ನು ಖರೀದಿಸುತ್ತಾರೆ?