Latestಕ್ರೈಂಬೆಂಗಳೂರುವಿಡಿಯೋವೈರಲ್ ನ್ಯೂಸ್

ಮಹಿಳಾ ಪ್ರಯಾಣಿಕಳಿಗೆ ರಸ್ತೆ ಮಧ್ಯೆ ಕಪಾಳಕ್ಕೆ ಹೊಡೆದ Rapido ಬೈಕ್ ಚಾಲಕ..! ವಿಡಿಯೋ ವೈರಲ್

335

ನ್ಯೂಸ್ ನಾಟೌಟ್: ಅತಿವೇಗದ ಚಾಲನೆ ಬಗ್ಗೆ ದೂರು ನೀಡಿದ್ದಕ್ಕೆ ಆಕ್ರೋಶಗೊಂಡ Rapido ಬೈಕ್ ಚಾಲಕ ಮಹಿಳಾ ಪ್ರಯಾಣಿಕಳಿಗೆ ರಸ್ತೆ ಮಧ್ಯೆ ಕಪಾಳಮೋಕ್ಷ ಮಾಡಿದ ಘಟನೆ ಬೆಂಗಳೂರಿನ ಜಯನಗರದಲ್ಲಿ ಇಂದು(ಜೂ.16) ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೈಕ್ ಸವಾರನ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಆಭರಣ ಅಂಗಡಿಯೊಂದರ ಉದ್ಯೋಗಿಯಾಗಿದ್ದ ಮಹಿಳೆ ರ್ಯಾಪಿಡೋ (Rapido) ಬೈಕ್ ಬುಕ್ ಮಾಡಿದ್ದಳು. ಬೈಕ್ ಸವಾರನ ಅತಿವೇಗದ ಚಾಲನೆ ವಿರುದ್ಧ ಆರೋಪಿಸಿದ ಮಹಿಳೆ ಪ್ರಯಾಣವನ್ನು ಅರ್ಧದಲ್ಲೇ ಕೊನೆಗೊಳಿಸಲು ಆ್ಯಪ್ ನಲ್ಲಿ ಆಯ್ಕೆ ಮಾಡಿದ್ದಳು. ಈ ವೇಳೆ ಸವಾರ ಮಹಿಳೆಯನ್ನು ಪ್ರಶ್ನಿಸಿದ್ದು ನಂತರ ವಾಗ್ವಾದ ಶುರುವಾಗಿದೆ. ಮಾತಿಗೆ ಮಾತು ಬೆಳೆದ ಸವಾರ ಮಹಿಳೆಯ ಕಪಾಳಕ್ಕೆ ಹೊಡೆದಿದ್ದು ಆಕೆ ನೆಲದ ಮೇಲೆ ಉರುಳಿ ಬಿದ್ದಿದ್ದಾಳೆ.

ಪೊಲೀಸ್ ಮೂಲಗಳು ಹೇಳುವಂತೆ, ಮಹಿಳೆ ಆರಂಭದಲ್ಲಿ ಔಪಚಾರಿಕ ದೂರು ದಾಖಲಿಸಲು ಮುಂದಾಗಲಿಲ್ಲ. ಹೀಗಾಗಿ NCR ದಾಖಲಿಸಲಾಗಿದೆ. ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ NCR ಅನ್ನು ಔಪಚಾರಿಕ FIR ಆಗಿ ಅಪ್‌ ಗ್ರೇಡ್ ಮಾಡುವ ಬಗ್ಗೆ ಯೋಚಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ವಿವರವಾದ ತನಿಖೆ ನಡೆಯುತ್ತಿದೆ.

ತಮ್ಮ ಜೀವನ ಚರಿತ್ರೆಯ ಸಿನಿಮಾ ಮಾಡದಂತೆ ದೂರು ನೀಡಿದ ಸಾಲುಮರದ ತಿಮ್ಮಕ್ಕ..! ತಿಮ್ಮಕ್ಕನ ಮಗನ ಮೇಲೆ ಕಾರು, ಹಣ ಕೇಳಿರುವ ಆರೋಪ..?

ಪ್ರಧಾನಿ ಮೋದಿಗೆ ಸೈಪ್ರಸ್‌ ದೇಶದ ಅತ್ಯುನ್ನತ ಗೌರವ, ಇಲ್ಲಿದೆ ಸಂಪೂರ್ಣ ಮಾಹಿತಿ 

See also  ಬೆಳ್ಳಾರೆ:ಬೆಳ್ಳಂಬೆಳಗ್ಗೆ ಧಗ ಧಗ ಹೊತ್ತಿ ಉರಿದ ಪಿಕಪ್!ವಾಹನದ ಮುಂಭಾಗ ಸುಟ್ಟು ಕರಕಲು!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget