ಕರಾವಳಿಕ್ರೈಂ

ಟಿವಿ ನೋಡಲು ಹೋದ ಬಾಲಕಿ ಮೇಲೆ ಅತ್ಯಾಚಾರ,ಗರ್ಭಿಣಿ:ಗರ್ಭಪಾತ ಮಾಡಿಸಲು ಹೋದ ಇಬ್ಬರ ಬಂಧನ

ನ್ಯೂಸ್ ನಾಟೌಟ್ : ಬೆಳ್ತಂಗಡಿಯ ಕಡಿರುದ್ಯಾವರದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು ,ಘಟನೆ ಸಂಬಂಧ ಪಟ್ಟಂತೆ ಇಬ್ಬರನ್ನು ಬಂಧಿಸಲಾಗಿದೆ.ಮನೋಹರ ಹಾಗೂ ಸುಧೀರ್ ಬಂಧಿತ ಆರೋಪಿಗಳು.

ಏನಿದು ಘಟನೆ?

ಬಾಲಕಿ ತನ್ನ ಹತ್ತಿರದ ಮನೆ ಸುಧೀರ್ ಎಂಬಾತನ ಮನೆಗೆ ಶಾಲಾ ರಜಾ ದಿನಗಳಲ್ಲಿ ಟಿವಿ ನೋಡಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ.ಆತ ಬಾಲಕಿಯನ್ನು ಹತ್ತಿರದಲ್ಲೇ ಇರುವ ಅಜ್ಜಿಯ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ.ಅಲ್ಲದೇ ಈ ವಿಚಾರವನ್ನು ಮನೆಯವರಲ್ಲಿ ಹೇಳಿದ್ದಲ್ಲಿ ನಿನ್ನ ಮೇಲೆ ಪೊಲೀಸ್ ಕಂಪ್ಲೇಟ್ ಕೊಡುವುದಾಗಿ ಹೆದರಿಸಿದ್ದಾನೆ. ಬಾಲಕಿ ಗರ್ಭವತಿಯನ್ನಾಗಿಯೂ ಮಾಡಿದ್ದಾನೆ.ನಂತರ ಬಾಲಕಿಯನ್ನು ಆರೋಪಿಗಳಾದ ಪಾರ್ವತಿ, ಮನೋಹರ, ಮಾಧವ ಸೇರಿ ಮಾರುತಿ ಓಮಿನಿ ಕಾರಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದಾರೆ.


ಬಾಲಕಿಗೆ ಲೈಂಗಿಕ ದೌರ್ಜನ್ಯ ಆದ ಬಗ್ಗೆ 1098 ನೇ ಚೈಲ್ಡ್ ಲೈನ್ ನಿಂದ 30-12-2022 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ಬಂದು ಇದನ್ನು ಖಚಿತ ಪಡಿಸಲು ಸಿಡಿಪಿಒ ಕಛೇರಿಯ ಅಧಿಕಾರಿಯವರೊಂದಿಗೆ ಠಾಣಾ ಮಹಿಳಾ ಸಿಬ್ಬಂದಿಯವರು ತೆರಳಿದ್ದಾರೆ.ಮಾಹಿತಿ ಪಡೆಯಲು ಪ್ರಯತ್ನಿಸಿದಾಗ ಮಾಹಿತಿಯನ್ನು ನೀಡಿರಲಿಲ್ಲ. ಹೀಗಾಗಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ
ಮೂಡಬಿದ್ರೆಯ ಪ್ರಜ್ಞಾ ನಿರ್ಗತಿಕ ಮಕ್ಕಳ ಕುಟೀರದಲ್ಲಿ ಅಪ್ತ ಸಮಾಲೋಚಕಿರವರ ಆಪ್ತ ಸಮಲೋಚನೆಯ ಬಳಿಕ ನೀಡಿದ ಮಾಹಿತಿಯಂತೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Related posts

ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಆನ್ಲೈನ್ ವಿದ್ಯಾರ್ಥಿ ವೇತನ ಪರೀಕ್ಷೆ

ಸೇನಾ ಚೆಕ್ ಪೋಸ್ಟ್ ಮೇಲೆ ಉಗ್ರರ ಭೀಕರ ದಾಳಿ..! CRPF ಯೋಧ ಹುತಾತ್ಮ, 6 ಭದ್ರತಾ ಸಿಬ್ಬಂದಿಗಳಿಗೆ ಗಾಯ..!

ಕಲ್ಲುಗುಂಡಿಯಲ್ಲಿ ಸರಣಿ ಅಪಘಾತ, ಕಾರುಗಳು ನಜ್ಜುಗುಜ್ಜು, ಬೈಕ್ ಸವಾರನಿಗೆ ಗಾಯ