ಕ್ರೈಂಬೆಂಗಳೂರು

6 ವರ್ಷದ ಬಾಲಕಿ ಮೇಲೆ ಭೀಕರ ಅತ್ಯಾಚಾರವೆಸಗಿ ಕೊಲೆಗೈದಿರುವ ಶಂಕೆ, ಭೀಕರತೆಯನ್ನು ಸಾರುತ್ತಿದೆ ಮೃತದೇಹ

155

ನ್ಯೂಸ್ ನಾಟೌಟ್: ಇನ್ನೂ ಲೋಕ ಅರಿಯದ 6 ವರ್ಷದ ಬಾಲಕಿ ಮೇಲೆ ಭೀಕರ ಅತ್ಯಾಚಾರ ಎಸಗಿರುವ ಶಂಕೆಯೊಂದು ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ರೈಲ್ವೇ ನಿಲ್ದಾಣದ ಬಳಿ ವ್ಯಕ್ತವಾಗಿದೆ. ಅತ್ಯಾಚಾರದಿಂದ ಸಾವಿಗೀಡಾಗಿರುವ ರೀತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.

ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ನ್ಯೂಸ್ ನಾಟೌಟ್ ಗೆ ಮಾಹಿತಿ ನೀಡಿದ್ದಾರೆ. ಕೊಲೆಗೀಡಾದ ಮಗುವಿನ ಮೇಲೆ ಮೃಗೀಯ ರೀತಿಯಲ್ಲಿ ವರ್ತಿಸಲಾಗಿದೆ. ಮುಖದ ಮೇಲೆಲ್ಲ ಉಗುರಿನಿಂದ ಪರಚಿದ ಗಾಯಗಳು ಕಾಣಿಸುತ್ತಿವೆ. ಮುಖದ ಮೇಲೆಲ್ಲ ರಕ್ತ ಚೆಲ್ಲಾಡಿದೆ ಎಂದು ಮಾಹಿತಿ ಲಭಿಸಿದೆ. ಸುತ್ತಮುತ್ತಲಿನ ಸಿಸಿ ಕ್ಯಾಮೆರಾವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಳವಾರ (ಜೂ.೩) ರಾತ್ರಿ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ತನಿಖೆಯನ್ನು ರೈಲ್ವೇ ಪೊಲೀಸರು ನಡೆಸುತ್ತಿದ್ದಾರೆ ಎನ್ನಲಾಗಿದೆ. ಅತ್ಯಾಚಾರ ನಡೆದಿದೆ ಅನ್ನುವುದನ್ನು ಇನ್ನೂ ಪೊಲೀಸರು ಸ್ಪಷ್ಟಪಡಿಸಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

See also  ಚಿನ್ನಸ್ವಾಮಿ ಸ್ಟೇಡಿಯಂಗೆ ಸಿಐಡಿ ಅಧಿಕಾರಿಗಳು ಭೇಟಿ, ತನಿಖೆ..! RCB ಯ ಉಚಿತ ಟಿಕೆಟ್ ಜಾಹೀರಾತು ನೋಡಿ ಬಂದಿದ್ದೆ ಎಂದ ಗಾಯಾಳು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget