Latestಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ಚಿನ್ನ ಕಳ್ಳ ಸಾಗಾಟ ಕೇಸ್‌ ನಲ್ಲಿ ನಟಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ..! ವಿಚಾರಣೆ ವೇಳೆ ಹಿಂಸೆ ಕೊಡ್ತಾರೆ ಎಂದು ಜಡ್ಜ್ ಮುಂದೆ ಗೋಳಾಡಿದ ನಟಿ..!

640

ನ್ಯೂಸ್ ನಾಟೌಟ್: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ ನಲ್ಲಿ ನಟಿ ರನ್ಯಾ ರಾವ್‌ ಗೆ ಮಾರ್ಚ್ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಕೋರ್ಟ್ ಆದೇಶಕ್ಕೂ ಮುನ್ನ ನಟಿಯನ್ನು ತೀವ್ರವಾಗಿ ವಿಚಾರಣೆ ನಡೆಸಲಾಯಿತು. ಈ ವೇಳೆ ಜಡ್ಜ್ ಮುಂದೆ ನಟಿ ಕಣ್ಣೀರಿಟ್ಟು ಗೋಳಾಡಿದರು.

ಏನೇ ಪ್ರಶ್ನೆ ಕೇಳಿದ್ರೂ ಸರಿಯಾಗಿ ಉತ್ತರ ಕೊಡದ ರನ್ಯಾರಾವ್, ನನ್ನನ್ನು ಈ ಕೇಸ್ ನಲ್ಲಿ ಸಿಲುಕಿಸಲಾಗಿದೆ. ಈ ಹಿಂದೆ ಯಾವತ್ತೂ ಚಿನ್ನ ಸಾಗಟ ಮಾಡಿಲ್ಲ.. ನಂಗೇನು ಗೊತ್ತಿಲ್ಲ ಅಂತಷ್ಟೇ ಹೇಳ್ತಿದ್ದಾರೆ ಎನ್ನಲಾಗಿದೆ.

ವಿಚಾರಣೆ ವೇಳೆ ತೊಂದ್ರೆ ಕೊಡ್ತಿದ್ದಾರಾ? ಹಿಲ್ ಟ್ರೀಟ್ಮೆಂಟ್ ಕೊಟ್ಟಿದ್ದಾರಾ..? ಎಂದು ಜಡ್ಜ್ ಕೇಳಿದ್ದಕ್ಕೆ ಕಣ್ಣೀರಿಡುತ್ತಲೇ ಉತ್ತರಿಸಿದ ರನ್ಯಾ, ಮಾನಸಿಕವಾಗಿ ಬಹಳ ಹಿಂಸೆ ನೀಡಿದ್ದಾರೆ. ನಿನಗೆ ಇದ್ರಿಂದ ಏನಾಗುತ್ತೆ ಗೊತ್ತಾ ಅಂತ ಭಯ ಬೀಳಿಸಿದ್ದಾರೆ. ಸತ್ಯ ಒಪ್ಪಿಕೋ ಅಂತ ಹೆದರಿಸುತ್ತಿದ್ದಾರೆ. ತಲೆಗೆ ಸುತ್ತಿಗೆಯಲ್ಲಿ ಹೊಡೆದಂತೆ ಪ್ರಶ್ನೆ ಕೇಳ್ತಾರೆ, ಕೆಟ್ಟದಾಗಿ ಬೈಯ್ದಿದ್ದಾರೆ, ನಾನು ಏನು ಮಾಡಿಲ್ಲ ಅಂದ್ರು ಹಿಂಸೆ ಕೊಡ್ತಿದ್ದಾರೆ ಎಂದು ಗಳಗಳನೆ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ನಾನು ಇದ್ರಿಂದ ಭಾವನಾತ್ಮಕವಾಗಿ ಕುಗ್ಗಿಹೋಗಿದ್ದೇನೆ ಎಂದು ಕೈ ಮುಗಿದು ಜಡ್ಜ್ ಮುಂದೆ ಬೇಡಿಕೊಂಡಿದ್ದಾರೆ.

ಇಂದು ಕಸ್ಟಡಿ ಅವಧಿ ಮುಗಿದ ಕಾರಣ ಆಕೆಯನ್ನು ಕೋರ್ಟ್ ಮುಂದೆ ಡಿಆರ್‌ಐ ಅಧಿಕಾರಿಗಳು ಹಾಜರುಪಡಿಸಿದ್ರು. ಈ ವೇಳೆ, ನನಗೆ ಟಾರ್ಚರ್ ಕೊಡ್ತಿದ್ದಾರೆ ಎಂದು ರನ್ಯಾ ಕಣ್ಣೀರಿಟ್ರು.. ಆದ್ರೆ, ಇದನ್ನು ತನಿಖಾಧಿಕಾರಿಗಳು ಅಲ್ಲಗಳೆದ್ರು. ಪ್ರಶ್ನೆ ಕೇಳೋದು ಕಿರುಕುಳ ಹೇಗಾಗುತ್ತೆ ಎಂದು ಪ್ರಶ್ನೆ ಮಾಡಿದ್ರು. ಕಡೆಗೆ, ರನ್ಯಾ ತನಿಖೆಗೆ ಅಸಹಕಾರ ಕೊಡ್ತಿದ್ದಾರೆ ಎಂದು ತೀರ್ಮಾನಿಸಿದ ನ್ಯಾಯಾಧೀಶರು, ಆಕೆಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ.

See also  ಉಚಿತ ಬಸ್ ಪ್ರಯಾಣಕ್ಕೆ ನಕಲಿ ಆಧಾರ್ ಕಾರ್ಡ್ ಬಳಸಿ ಸಿಕ್ಕಿಬಿದ್ದ ಮಹಿಳೆ..! ಕಂಡೆಕ್ಟರ್‌ ಮಾಡಿದ್ದೇನು ಗೊತ್ತಾ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget