Latestಕ್ರೈಂವೈರಲ್ ನ್ಯೂಸ್ಸಿನಿಮಾ

ರನ್ಯಾರಾವ್ ಮತ್ತು ಸಂಗಡಿಗರಿಗೆ 1 ವರ್ಷ ಜೈಲೇ ಗತಿ..! ನಟಿ ವಿರುದ್ಧ ‘ಕಾಫಿಪೋಸಾ ಕಾಯ್ದೆ’ ಜಾರಿಗೆ..!

365

ನ್ಯೂಸ್ ನಾಟೌಟ್: ಸ್ಯಾಂಡಲ್‌ವುಡ್ ನಟಿ ರನ್ಯಾರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಕೇಸ್‌ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ರನ್ಯಾರಾವ್ ಮತ್ತು ಸಂಗಡಿಗರು 1 ವರ್ಷ ಜೈಲಿನಲ್ಲೇ ಇರಬೇಕಾದ ಸ್ಥಿತಿ ಎದುರಾಗಿದೆ.

ರನ್ಯಾರಾವ್ ವಿರುದ್ಧ ಕಾಫಿಪೋಸಾ ಕಾಯ್ದೆಯನ್ನು (COFEPOSA Act) ಜಾರಿ ಮಾಡಲಾಗಿದೆ. ಹೀಗಾಗಿ ರನ್ಯಾರಾವ್ 1 ವರ್ಷ ಕಾಲ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ರನ್ಯಾರಾವ್ 100 ಕೆಜಿಯಷ್ಟು ಚಿನ್ನವನ್ನು ವಿದೇಶದಿಂದ ಕಳ್ಳ ಸಾಗಾಣೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಇದೀಗ ರನ್ಯಾರಾವ್, ತರುಣ್ ಕೊಂಡಾರಾಜ್ ಮತ್ತು ಸಾಹಿಲ್ ಜೈನ್ ವಿರುದ್ಧ ಕಾಫಿಪೋಸಾ ಜಾರಿ ಮಾಡಲಾಗಿದೆ.

ಕಾಫಿಪೋಸಾ ಎಂದರೆ ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ ಕಾಯ್ದೆಯಾಗಿದೆ. ಈ ಕಾಫಿಪೋಸಾ ಕಾಯ್ದೆಯನ್ನು ಕಳ್ಳಸಾಗಣೆ ಮಾಡುವವರ ವಿರುದ್ಧ ಹಾಕಲಾಗುತ್ತದೆ. ಆರೋಪಿಯು ಜಾಮೀನು ಪಡೆಯಬಾರದು ಎಂಬುದು ಈ ಕಾಯ್ದೆಯ ಮೂಲ ಉದ್ದೇಶವಾಗಿದೆ.

ಆರೋಪಿಯು ಜಾಮೀನು ಪಡೆದು ಹೊರಗೆ ಬಂದರೆ ನಿರಂತರವಾಗಿ ಮತ್ತೆ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಅಲ್ಲದೇ ಜೈಲಿನಿಂದ ಬಂದ ಬಳಿಕ ತಪ್ಪಿಸಿಕೊಳ್ಳಬಹುದು. ತನಿಖೆಗೆ ಸರಿಯಾಗಿ ಸಹಕಾರ ಕೊಡದೇ, ನಿರಂತರವಾಗಿ ಸ್ಮಗ್ಲಿಂಗ್‌ ನಲ್ಲಿ ಮುಂದುವರೆಯುತ್ತಾರೆ ಎಂದು ಕಾಯ್ದೆ ಜಾರಿಗೊಳಿಸಲಾಗುತ್ತದೆ.

ಕಾಫಿಪೋಸಾ ಕಾಯ್ದೆಯನ್ನು ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ(CEIB) ಜಾರಿ ಮಾಡುತ್ತದೆ. ಸಿಇಐಬಿಗೆ ವಿಚಾರ ನೀಡಬೇಕಿರೋದು ಡಿಆರ್‌ಐ(ಕಂದಾಯ ಗುಪ್ತಚರ ನಿರ್ದೇಶನಾಲಯ). ಕಾಫಿಪೋಸಾ ಕಾಯ್ದೆಯನ್ನು ಜಾರಿಗೊಳಿಸಿದರೆ ಆರೋಪಿಯು ಕನಿಷ್ಟ 1 ವರ್ಷಗಳ ಕಾಲ ಜೈಲಿನಲ್ಲೇ ಇರಬೇಕು ಎಂಬ ನಿಯಮವಿದೆ. 

ನಿಮ್ಮ ರಾಜ್ಯಗಳಲ್ಲಿರುವ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ ಎಂದ ಗೃಹ ಸಚಿವ..! ಮುಖ್ಯಮಂತ್ರಿಗಳಿಗೆ ಅಮಿತ್ ಶಾ ಸೂಚನೆ

‘ಜವನೆರೆ ಕಲ’ ಮಂಗಳೂರು ಆಕಾಶವಾಣಿ ಫೋನ್ ಇನ್ ಕಾರ್ಯಕ್ರಮ, ಸಾಮಾಜಿಕ ಜಾಲತಾಣದ ಬಗ್ಗೆ ಮನಮುಟ್ಟುವ ಕಾರ್ಯಕ್ರಮ ನೀಡಿದ ನ್ಯೂಸ್ ನಾಟೌಟ್’ ಸಿಬ್ಬಂದಿ ದಿನೇಶ್ ಎಂ

ಪಾಕ್ ನಟನ ಚಲನಚಿತ್ರ ಭಾರತದಲ್ಲಿ ಬಿಡುಗಡೆಗೆ ಅನುಮತಿ ನೀಡುವುದಿಲ್ಲ ಎಂದ ಕೇಂದ್ರ ಸರ್ಕಾರ..! ಸಿನಿಮಾ ಹಾಡು ಯೂಟ್ಯೂಬ್‌ ನಿಂದ ಡಿಲೀಟ್..!

See also  ಒಂದು ಈರುಳ್ಳಿ ಬರೋಬ್ಬರಿ 9 ಕೆಜಿ ತೂಕ..! ಇಷ್ಟು ದೊಡ್ಡ ಈರುಳ್ಳಿ ಬೆಳೆದದ್ದಾದರೂ ಹೇಗೆ? ಏನಿದರ ವಿಶೇಷ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget