ಕರಾವಳಿಕೊಡಗುಪುತ್ತೂರುರಾಜಕೀಯಸುಳ್ಯ

ಮುದ್ದಿನ ಶ್ವಾನ ಚಾಂಪ್ ನನ್ನು ಕಳೆದು ಕೊಂಡ ನೋವಲ್ಲಿ ರಮ್ಯಾ ,ಪುತ್ತೂರು ಕಾಂಗ್ರೆಸ್ ರೋಡ್ ಶೋಗೆ ಗೈರು

294

ನ್ಯೂಸ್ ನಾಟೌಟ್ : ಸ್ಯಾಂಡಲ್ ವುಡ್ ಖ್ಯಾತ ನಟಿ ರಮ್ಯಾ ಕಳೆದ ಎರಡು ದಿನಗಳಿಂದ ದುಖಃದಲ್ಲಿದ್ದಾರೆ.ಕಾರಣ ಅವರ ಮುದ್ದಿನ ಶ್ವಾನ ಚಾಂಪ್ ಇನ್ನಿಲ್ಲ ಅನ್ನುವ ಘಟನೆಯನ್ನು ಮರೆಯಲಾಗುತ್ತಿಲ್ಲ.ಚಾಂಪ್ ಕಣ್ಮರೆಯಾಗಿರುವ ವಿಷಯ ತಿಳಿದ ನಟಿ ರಮ್ಯಾ ಅವರು ನಾಯಿಯನ್ನು ಹುಡುಕಿಕೊಟ್ಟವರಿಗೆ ಬಹುಮಾನವನ್ನು ಘೋಷಿಸಿದ್ದರು.ಆದರೆ ಶ್ವಾನ ಮರಳಿ ಬಾರದ ಲೋಕಕ್ಕೆ ತೆರಳಿದೆ.ಈ ಹಿನ್ನಲೆಯಲ್ಲಿ ನಟಿ ರಮ್ಯಾ ಅವರು ನೋವಿನಲ್ಲಿದ್ದಾರೆ.

ಚಾಂಪ್ ಬದುಕುಳಿಯುತ್ತಿದ್ದರೆ ಅವರು ಬೆಂಗಳೂರು ಸೇರಿದಂತೆ ಹಲವು ಕಡೆ ಅಭ್ಯರ್ಥಿಗಳ ಪರ ಮತಪ್ರಚಾರಕ್ಕಾಗಿ ತೆರಳುತ್ತಿದ್ದರು.ರೋಡ್ ಶೋ ದಲ್ಲಿ ಪಾಲ್ಗೊಳ್ಳುತ್ತಿದ್ದರು.ಆದರೆ ಕಳೆದು ಹೋದ ಶ್ವಾನದ ಬೇಸರದಲ್ಲಿದ್ದ ರಮ್ಯಾ ಅವರು ರೋಡ್ ಶೋಗಳಿಗೆ ಗೈರಾಗಿದ್ದರು.ಪುತ್ತೂರಿಗೂ ಬರುತ್ತಾರೆನ್ನುವ ಸುದ್ದಿಯಿತ್ತು.ಆದರೆ ಅಲ್ಲಿಗೂ ಬಾರದೇ ತುಂಬಾ ಮಂದಿ ನಿರಾಶರಾದರು.

ಶನಿವಾರ ರಮ್ಯಾ ವಾಸವಿದ್ದ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ನಾಯಿ ಕಾಣೆಯಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ತನ್ನ ನೆಚ್ಚಿನ ನಾಯಿಯನ್ನು ಹುಡುಕಿಕೊಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಅದಾದ ಕೆಲವು ಹೊತ್ತಿನ ನಂತರ ಚಾಂಪ್ ಇನ್ನಿಲ್ಲ ಎಂದು ಅವರೇ ಬಹಿರಂಗ ಪಡಿಸಿದರು.

See also  ಭಯೋತ್ಪಾದಕರಿಗೆ ಹಣ ನೀಡಿದವರೇ ಪ್ರವೀಣ್ ಹತ್ಯೆಗೂ ನೆರವು ನೀಡಿದ್ದರು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget