Latest

ಪಾಕ್‌ ಪರ ಘೋಷಣೆ, ಕನ್ನಡಿಗರ ಬಗ್ಗೆ ಅವಹೇಳನಕಾರಿ ಬರಹ! ಶೌಚಾಲಯದ ಗೋಡೆ ಮೇಲಿನ ಬರಹಕ್ಕೆ ಇಬ್ಬರನ್ನು ಬಂಧಿಸಿದ ಪೊಲೀಸರು

626

ನ್ಯೂಸ್‌ ನಾಟೌಟ್: ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನ ಪರ ಘೋಷಣೆ ಬರೆದು, ಕನ್ನಡಿಗರ ಬಗ್ಗೆ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಿಡದಿ ಪೊಲೀಸರು ಬಂಧಿಸಿರುವ ಘಟನೆ ಬಗ್ಗೆ ವರದಿಯಾಗಿದೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕು ನಿಂಬರಗ ಗ್ರಾಮದ ಸಾದೀಕ್ (20) ಹಾಗೂ ಯಾದಗಿರಿ ಜಿಲ್ಲೆ ಸುರಪುರ ತಾಲೂಕು ಖಾನಾ ಪುರ ಗ್ರಾಮದ ಹೈಮದ್(24) ಬಂಧಿತರು ಎಂದು ತಿಳಿದು ಬಂದಿದೆ.

ಇಬ್ಬರು ಬಂಧಿತರು ಕಳೆದ 1 ವರ್ಷಗಳಿಂದ ಟಯೋಟ ಬೋಷುಕೋ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದರು.  ಇಬ್ಬರು ಕೆಂಗೇರಿ ಉಪ ನಗರದಲ್ಲಿ ಬಾಡಿಗೆ ಮನೆಪಡೆದು ವಾಸವಿದ್ದರೆಂದು ಪೊಲೀಸರು ತಿಳಿಸಿದ್ದಾರೆ.ಇನ್ನು ಘಟನೆ ಬೆಳಕಿಗೆ ಬಂದಿದ್ದು ಬಿಡದಿ ಟಯೋಟ ಕಾರ್ಖಾನೆಯಲ್ಲಿ. ಮಾ.14ರಂದು ಇಬ್ಬರು ಆರೋಪಿಗಳು ಕಾರ್ಖಾನೆಯ ಶೌಚಾಲಯದ ಗೋಡೆ ಮೇಲೆ ಪಾಕ್‌ ಪರ ಘೋಷಣೆ ಕೂಗಿ ಬರಹ ಬರೆದಿದ್ದಾರೆ. ಜೊತೆಗೆ ಕನ್ನಡಿಗರ ಬಗ್ಗೆಯೂ ಅವಹೇಳನಕಾರಿಯಾಗಿ ಬರೆದಿದ್ದರು.ಈ ಬರಹದ ಪೋಟೋ ತೆಗೆದು ಕಂಪನಿಯ ನೋಟಿಸ್ ಬೋರ್ಡ್‌ನಲ್ಲಿ ಆಡಳಿತ ವಿಭಾಗದಿಂದ ಪ್ರಕಟಿಸಿದಂತೆ ಮಾಡಲಾಗಿತ್ತು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡ ಕಾರ್ಖಾನೆ ಬಿಡದಿ ಠಾಣೆಯಲ್ಲಿ ದೂರು ಸಲ್ಲಿಸಿತ್ತು ಎಂದು ತಿಳಿದು ಬಂದಿದೆ.

See also  ದೇವರು ಮೈಮೇಲೆ ಬಂದಂತೆ ನಟಿಸಿದ ಮಹಿಳೆಗೆ ಕೈಯಲ್ಲಿ ಬೆಂಕಿ ಕೊಟ್ಟು ಪಾಠ ಮಾಡಿದ ವೃದ್ಧ..! ವಿಡಿಯೋ ವೈರಲ್
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget