ಕರಾವಳಿ

ರಂಜಾನ್ ವಿಶೇಷ: 52 ಮನೆಗಳಿಗೆ ಕಿಟ್ ವಿತರಣೆ

721

ಕಲ್ಲುಗುಂಡಿ: ಸುನ್ನೀ ದಅವಾ ವಿಂಗ್ ಕಲ್ಲುಗುಂಡಿ ಹಾಗೂ ಎಸ್‌ ಎಸ್ ಎಫ್, ಎಸ್ ವೈ ಯಸ್ ಕಲ್ಲುಗುಂಡಿ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ 52 ಬಡ ಕುಟುಂಬಗಳಿಗೆ ಶುಕ್ರವಾರ ಆಹಾರ ಕಿಟ್ ವಿತರಿಸಲಾಯಿತು.

ಇದಕ್ಕಾಗಿ ವಿವಿಧ ದಾನಿಗಳಿಂದ ಸುಮಾರು 75000 ರೂ. ಸಂಗ್ರಹಿಸಲಾಗಿತ್ತು. ಎಸ್ ವೈ ಯಸ್ ಕಲ್ಲುಗುಂಡಿ ಬ್ರಾಂಚ್ ಅಧ್ಯಕ್ಷ ಅಬ್ದುಲ್ಲತೀಫ್ ಮುಸ್ಲಿಯಾರ್ ಕೊಯನಾಡು ಅಧ್ಯಕ್ಷತೆಯಲ್ಲಿ ಎಸ್‌ ಎಸ್ ಎಫ್ ರಾಜ್ಯ ನಾಯಕ ಎ.ಎಂ.ಫೈಝಲ್ ಝುಹ್ ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ರವರು ಕಿಟ್ ವಿತರಣೆ ನಡೆಸಿದರು. ಎಸ್‌ ಎಸ್ ಎಫ್ ಕಲ್ಲುಗುಂಡಿ ಯೂನಿಟ್ ಅಧ್ಯಕ್ಷ ರಂಶಾದ್ ನೇತೃತ್ವದಲ್ಲಿ ಕಿಟ್ ವಿತರಣೆಯನ್ನು ಫಲಾನುಭವಿಗಳಿಗೆ ತಲುಪಿಸಲಾಯಿತು. ಎಸ್‌ ಎಸ್ ಎಫ್ ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್, ಎಸ್ ವೈ ಯಸ್ ಕೋಶಾಧಿಕಾರಿ ಇರ್ಷಾದ್ ದಂಡಕಜೆ, ಕಾರ್ಯದರ್ಶಿ ಅಶ್ರಫ್ ಚಡಾವು, ಸದಸ್ಯರಾದ ಲತೀಫ್ ಬಾಲಂಬಿ, ಹಸೈನಾರ್ ಚಟ್ಟೆಕಲ್ಲು, ಅಲೀ ಚಟ್ಟೆಕಲ್ಲು, ಝಾಕಿರ್ ಕೊಯನಾಡು, ರುನೈಝ್ ಕೊಯನಾಡು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

See also  ದ್ವಿಚಕ್ರ ವಾಹನ ಕದಿಯುತ್ತಿದ್ದ ಕಳ್ಳನನ್ನು ಬಂಧಿಸಿದ ಪೊಲೀಸರು, ಕಳವುಗೈದ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಸಿಕ್ಕಿ ಬಿದ್ದದ್ದು ಹೇಗೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget