ಕ್ರೈಂಬೆಂಗಳೂರುವೈರಲ್ ನ್ಯೂಸ್

ರಾಮೇಶ್ವರಂ ಕೆಫೆ ಬ್ಲಾಸ್ಟ್ ಶಂಕಿತ ಉಗ್ರನ ರೇಖಾ ಚಿತ್ರ ಬಿಡುಗಡೆ, ಇವನೇ ನೋಡಿ ಬಾಂಬರ್ ಉಗ್ರ

272

ನ್ಯೂಸ್ ನಾಟೌಟ್: ರಾಮೇಶ್ವರಂ ಕೆಫೆ ಬ್ಲಾಸ್ಟ್ ನ ಶಂಕಿತ ಉಗ್ರನ ಸುಳಿವು ಕೊಟ್ಟರೆ 10 ಲಕ್ಷ ನಗದು ಬಹುಮಾನ ಕೊಡುವುದಾಗಿ ಬಾಂಬರ್ ನ ಸಿಸಿಟಿವಿ ಫೋಟೋವೊಂದನ್ನು ಬುಧವಾರ ಎನ್‌ಐಎ (NIA) ಬಿಡುಗಡೆ ಮಾಡಿತ್ತು.

ಈ ಬೆನ್ನಲ್ಲೇ ಸಿಸಿಬಿ (CCB ) ಪೊಲೀಸರು ಬಾಂಬರ್ ನ ಮತ್ತೊಂದು ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಖ್ಯಾತ ಸ್ಕೆಚ್ ಆರ್ಟಿಸ್ಟ್ ನಿಂದ ಬಾಂಬರ್ ನ ಇಮ್ಯಾಜಿನರಿ ಸ್ಕೆಚ್ ಬಿಡಿಸಲಾಗಿದೆ. ಸ್ಕೆಚ್ ಆರ್ಟಿಸ್ಟ್ ಎನ್‌ಐಎ ಬಿಡುಗಡೆ ಮಾಡಿದ ಸಿಸಿಟಿವಿ ಫೋಟೋವನ್ನು ಆಧರಿಸಿ ಸಂಪೂರ್ಣ ಮುಖದ ಇಮ್ಯಾಜಿನರಿ ಸ್ಕೆಚ್ ಮಾಡಿದ್ದಾರೆ. ಆರ್ಟಿಸ್ಟ್ ಹರ್ಷ ಅವರು ಈ ರೇಖಾಚಿತ್ರವನ್ನು ಬಿಡಿಸಿದ್ದಾರೆ.

ಮಾಸ್ಕ್ ಧರಿಸಿದ ರೀತಿಯಲ್ಲಿ ಹಾಗೂ ಮಾಸ್ಕ್ ಇಲ್ಲದೇ ಟೋಪಿ ಕನ್ನಡಕ ಧರಿಸಿದ ರೇಖಾಚಿತ್ರವನ್ನು ಬಿಡಿಸಲಾಗಿದೆ. ಇದೇ ರೀತಿ ಬಾಂಬರ್ ಇರಬಹುದು ಎಂದು ಕಲ್ಪಿಸಿ ಕಲಾವಿದ ಹರ್ಷ ಈ ರೇಖಾಚಿತ್ರ ಬಿಡಿಸಿದ್ದಾರೆ. ಸಿಸಿಟಿವಿಯಲ್ಲಿ ಬಾಂಬರ್ ದೃಶ್ಯ ಸಮರ್ಪಕವಾಗಿ ಸೆರೆಯಾಗದ ಕಾರಣ ರೇಖಾಚಿತ್ರ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದರು. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯವನ್ನು ಆಧಾರವಾಗಿ ಇಟ್ಟುಕೊಂಡು ಸಿಸಿಬಿ ಶಂಕಿತ ಉಗ್ರನ ರೇಖಾಚಿತ್ರ ತಯಾರಿ ಮಾಡಿದೆ. ಈಗಾಗಲೇ ಸಾರ್ವಜನಿಕರಿಂದ ಸಾಕಷ್ಟು ಕರೆಗಳು ಬಂದಿವೆ. ಆರೋಪಿಯನ್ನು ನೋಡಿದ್ದಾಗಿ ಕರೆಗಳು ಬರುತ್ತಿದ್ದ ಕಾರಣ ರೇಖಾಚಿತ್ರ ಬಿಡುಗಡೆ ಮಾಡಲು ಸಿಸಿಬಿ ತಯಾರಿ ನಡೆಸಿತ್ತು.

See also  ವಿವಾಹಿತ ಗೋವಿಂದಮ್ಮಳ ಜೊತೆ ಅಬ್ದುಲ ನ ಅಕ್ರಮ ಸಂಬಂಧ..! ಅಡ್ಡಿಯಾಗಿದ್ದ ಮಗುವಿಗೆ ಚಾಕಲೇಟ್ ಕೊಡಿಸಿ ಕೊಲೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget