ಕ್ರೈಂವೈರಲ್ ನ್ಯೂಸ್

ಕಾಮುಕರಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ಯುವತಿಗೆ ಕಾರು ಡಿಕ್ಕಿ..! ಆಕೆಯ ಜೊತೆಗಿದ್ದ ರಮೇಶ್ ಹೇಳಿದ್ದೇನು..?

ನ್ಯೂಸ್ ನಾಟೌಟ್: ತನ್ನೊಡನೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗಳಿಂದ ತಪ್ಪಿಸಿಕೊಳ್ಳಲು ಓಡಿಹೋಗಲು ಯತ್ನಿಸುತ್ತಿದ್ದ ವೇಳೆ 20 ವರ್ಷದ ಯುವತಿ ಕಾರಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಚೆನ್ನೈನ ತಿರುವಣ್ಣಾಮಲೈ ನಲ್ಲಿ ವರದಿಯಾಗಿದೆ.

ಕೇರಳದ ತ್ರಿಶೂರ್‌ನ ಎಸ್‌ ಪವಿತ್ರಾ ಮೃತ ಯುವತಿ ಎಂದು ಗುರುತಿಸಲಾಗಿದೆ. ಶನಿವಾರ ನಸುಕಿನ ವೇಳೆ ಆಕೆ ತನ್ನ ಸಂಗಾತಿ ಪಿ ರಮೇಶ್ (21) ಜೊತೆ ಚೆನ್ನೈನ ಮಾಧವರಂನಿಂದ ತಿರುವಣ್ಣಾಮಲೈಗೆ ಪ್ರಯಾಣಿಸುತ್ತಿದ್ದಳು ಎಂದು ವರದಿ ತಿಳಿಸಿದೆ. ಪವಿತ್ರಾ ಚೆನ್ನೈನ ಜವಳಿ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದು, ರಮೇಶ್ ನಗರದ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಮೇಶ್ ಹೇಳಿಕೆ ಪ್ರಕಾರ, ಶುಕ್ರವಾರ ರಾತ್ರಿ ಇಬ್ಬರೂ ತಿರುವಣ್ಣಾಮಲೈಗೆ ತೆರಳಿದ್ದರು. ಒಲಕ್ಕೂರು ಟೋಲ್‌ ಗೇಟ್‌ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಮ್ಮನ್ನು ತಡೆದು, ಫೋನ್‌ ಕಸಿದುಕೊಂಡರು, ನಂತರ ಪವಿತ್ರಾ ಜೊತೆ ಅನುಚಿತವಾಗಿ ವರ್ತಿಸಲು ಯತ್ನಿಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಪವಿತ್ರಾ ಓಡಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಡಿಕ್ಕಿ ಹೊಡೆದ ಕಾರು ವೇಗವಾಗಿ ಹೊರಟು ಹೋಗಿದೆ. ಹಾಗೆಯೇ ಇದನ್ನು ನೋಡಿ ಇಬ್ಬರು ಅಪರಿಚಿತ ವ್ಯಕ್ತಿಗಳು ಓಡಿ ಹೋದರು ಎಂದು ರಮೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ನಾವು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ರಮೇಶ್ ಹೇಳಿಕೆಯ ಬಗ್ಗೆ ನಮ್ಮ ತನಿಖೆಯು ಪ್ರಸ್ತುತ ನಡೆಯುತ್ತಿದೆ, ಏಕೆಂದರೆ ನಮಗೆ ಆತನ ಹೇಳಿಕೆಗಳ ಬಗ್ಗೆ ಅನುಮಾನಗಳಿವೆ. ಒಂದೆರೆಡು ದಿನಗಳಲ್ಲಿ ವಿಷಯ ತಿಳಿಯಲಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

Related posts

ಪುತ್ತೂರು: ಚೈತ್ರ ಕುಂದಾಪುರ ಪ್ರಕರಣದ ಬೆನ್ನಲ್ಲೆ ಮತ್ತೊಂದು ಮಹಾವಂಚನೆ! ನಳಿನ್ ಕುಮಾರ್ ಕಟೀಲ್ ಹೆಸರಿನಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ-ಕೋಟಿ ಡೀಲ್! ಈ ಬಗ್ಗೆ ಪುತ್ತಿಲ ಪರಿವಾರ ಹೇಳಿದ್ದೇನು..?

ಆನೆ ಕಾರ್ಯಾಚರಣೆ ತಂಡದ ಬಳಿ ಬಂದೂಕು ಇರಲಿಲ್ಲ ಎಂದ ವೈದ್ಯ..! ಹಾಗಾದ್ರೆ ಅರ್ಜುನ ಕೊನೆಯುಸಿರೆಳೆದದ್ದು ಹೇಗೆ..? ಸ್ಪೋಟಕ ಮಾಹಿತಿ ಬಿಚ್ಚಿಟ್ಟ ವನ್ಯಜೀವಿ ವೈದ್ಯ ಹೇಳಿದ್ದೇನು?

ಪ್ರಧಾನಿ ಮೋದಿ ಬಗ್ಗೆ ಸ್ವಾಮೀಜಿ ಹೇಳಿದ ಸ್ಪೋಟಕ ಭವಿಷ್ಯವೇನು..? ಸ್ವಾಮೀಜಿ ಜನರಿಗೆ ಕೊಟ್ಟ ಎಚ್ಚರಿಕೆ ಏನು? ವಿವಾದ ಸೃಷ್ಟಿಯಾಗಿದ್ದೇಕೆ?