ಕರಾವಳಿರಾಜಕೀಯ

ಇದು ನನ್ನ ಕೊನೆಯ ಚುನಾವಣೆ ಸ್ಪರ್ಧೆ: ರಮಾನಾಥ ರೈ

ನ್ಯೂಸ್‌ನಾಟೌಟ್‌: ಬಂಟ್ವಾಳ ಕ್ಷೇತ್ರದಲ್ಲಿ ಎಂಟು ಬಾರಿ ಸ್ಪರ್ಧಿಸಿದ್ದು, ಇಲ್ಲಿನ ಜನತೆ ನನ್ನ ಕೈಬಿಟ್ಟಿಲ್ಲ. ಮಾ.10ರಿಂದ ಕ್ಷೇತ್ರಾದ್ಯಂತ ಕಾಂಗ್ರೆಸ್‌ ರಥ ಯಾತ್ರೆ ಹಮ್ಮಿಕೊಳ್ಳಲಾಗಿದೆ. ನನ್ನ ಅಧಿಕಾರವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮುಂದಿನದು ಒಂಭತ್ತನೇ ಚುನಾವಣೆ ಮತ್ತು ನನ್ನ ಕೊನೆಯ ಸ್ಪರ್ಧೆ ಎಂದು ಮಾಜಿ ಸಚಿವ ರಮಾನಾಥ ರೈ ಬಂಟ್ವಾಳ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನನ್ನ ಕ್ಷೇತ್ರದಿಂದಲೇ ರಾಜಕೀಯ ಆರಂಭಿಸಿದ್ದೇನೆ. ಚುನಾವಣೆಗೆ ನಿಲ್ಲುವುದಕ್ಕಾಗಿ ಬೇರೆ ಎಲ್ಲಿಂದಲೋ ಬಂದಿಲ್ಲ. ಕಾಂಗ್ರೆಸ್‌ ನೀಡಿದ ಅವಕಾಶದಿಂದ ಜನಸೇವೆ ಮಾಡಲು ಸಾಧ್ಯವಾಯಿತು. ಯಾರೋ ಮಾಡಿದ ಅಭಿವೃದ್ಧಿ ಕಾರ್ಯವನ್ನು ನಾನು ಮಾಡಿದೆ ಎಂದು ಹೇಳುವ ಅಭ್ಯಾಸ ನನಗಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನರು ನನ್ನನ್ನು ಗೆಲ್ಲಿಸಿದರೆ ಇನ್ನೂಹೆಚ್ಚಿನ ರೀತಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುತ್ತೇನೆ ಎಂದರು.

Related posts

ಲಕ್ಷ್ಮಿ ಹೆಬ್ಬಾಳ್ಕರ್‌ ಬೆಂಬಲಿಗರಿಂದ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ..! ಸಚಿವೆಯ ಬಗ್ಗೆ ಅಸಭ್ಯ ಪದ ಬಳಕೆ ಆರೋಪ..!

ಕೆ.ಎಂ.ಎಫ್‌ ಒಕ್ಕೂಟದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಇಂದು(ಜು.12) ಮತದಾನ, ಕುತೂಹಲ ಸೃಷ್ಟಿಸಿದ ಬಿಜೆಪಿ-ಕಾಂಗ್ರೆಸ್ ಪೈಪೋಟಿ..!

ಚಪ್ಪಲಿ ಹಾರ ಹಾಕಿಕೊಂಡು ಮತಯಾಚಿಸಿದ ಭೂಪ! ಇಲ್ಲಿದೆ ವೈರಲ್ ವಿಡಿಯೋ