Latestದೇಶ-ವಿದೇಶವೈರಲ್ ನ್ಯೂಸ್

ದೇಶದ ಮೊದಲ ಸಮುದ್ರ ಸೇತುವೆ ಇಂದು(ಎ.6) ಉದ್ಘಾಟನೆ, ರಾಮನವಮಿಯಂದು 550 ಕೋಟಿ ರೂ. ವೆಚ್ಚದ ವಿಶಿಷ್ಟ ಸೇತುವೆ ಮೋದಿಯಿಂದ ಲೋಕಾರ್ಪಣೆ

1k

ನ್ಯೂಸ್ ನಾಟೌಟ್: ತಮಿಳುನಾಡಿನ ರಾಮೇಶ್ವರಂನಲ್ಲಿ ರಾಮನವಮಿಯಂದು ಪ್ರಧಾನಿ ನರೇಂದ್ರ ಮೋದಿ ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಪಂಬನ್ ಎಂದು ಕರೆಯಲ್ಪಡುವ ಈ ರೈಲು ಸೇತುವೆಯನ್ನು 550 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.‌

ಮಧ್ಯಾಹ್ನ 12 ಗಂಟೆಗೆ ಪಂಬನ್ ಮತ್ತು ರಾಮೇಶ್ವರಂ ನಡುವಿನ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು ಮೋದಿ ಉದ್ಘಾಟಿಸಲಿದ್ದಾರೆ. ಆ ಮೂಲಕ ರಸ್ತೆ ಸೇತುವೆಯಿಂದ ರೈಲು ಮತ್ತು ಹಡಗು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಬಳಿಕ ಸೇತುವೆಯ ಕಾರ್ಯಾಚರಣೆಯನ್ನು ವೀಕ್ಷಿಸಲಿದ್ದಾರೆ.

ಪುರಾಣಗಳಲ್ಲಿ ಬೇರೂರಿರುವ ಈ ಸೇತುವೆಯು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ರಾಮೇಶ್ವರಂ ಬಳಿಯ ಧನುಷ್ಕೋಡಿಯಿಂದ ರಾಮಸೇತು ನಿರ್ಮಾಣ ಕಾರ್ಯ ಪ್ರಾರಂಭವಾಯಿತು ಎಂದು ರಾಮಾಯಣದಲ್ಲಿ ಉಲ್ಲೇಖವಾಗಿದೆ.

ಇದರ ಉದ್ದ 2.08 ಕಿಲೋಮೀಟರ್. ಇದು 99 ಸ್ಪ್ಯಾನ್‌ಗಳನ್ನು ಮತ್ತು 72.5 ಮೀಟರ್‌ಗಳ ವರ್ಟಿಕಲ್ ಲಿಫ್ಟ್ ಸ್ಪ್ಯಾನ್ ಅನ್ನು ಹೊಂದಿದೆ ಮತ್ತು 17 ಮೀಟರ್ ಎತ್ತರಕ್ಕೆ ಏರುತ್ತದೆ. ಇದು ಹಡಗುಗಳ ಸುಗಮ ಚಲನೆಗೆ ಅನುಕೂಲವಾಗುತ್ತದೆ ಮತ್ತು ರೈಲು ಕಾರ್ಯಾಚರಣೆ ನಡೆಸಲು ಸಹಕಾರಿ.

 

See also  ಮಗನಿಗೆ ಆಟ ಅಪ್ಪನಿಗೆ ಪ್ರಾಣ ಸಂಕಟ..! ಪುತ್ರ ಬೈಕ್ ವ್ಹೀಲಿಂಗ್ ಮಾಡಿದ್ದಕ್ಕೆ ತಂದೆಗೆ ದಂಡ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget