ದೇಶ-ಪ್ರಪಂಚವೈರಲ್ ನ್ಯೂಸ್

ರಾಮಲಲ್ಲಾನಿಗೆ 27 ಕಿಲೋ ತೂಗುವ ಬೆಳ್ಳಿದೀಪ..! ಬೃಹತ್ ದೀಪಗಳನ್ನು ಬೆಳಗಿದ ಪೇಜಾವರ ಶ್ರೀ

ನ್ಯೂಸ್ ನಾಟೌಟ್: ಪೇಜಾವರ ಮಠದ ಭಕ್ತ, ಮುಂಬೈ ಉದ್ಯಮಿ ನಾಗೇಂದ್ರ ಆಚಾರ್ಯ-ಅರುಣಾ ಆಚಾರ್ಯ ದಂಪತಿ ಅಯೋಧ್ಯೆ ರಾಮನಿಗೆ ವಿಶಿಷ್ಟ ದೀಪಸೇವೆ ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ.

ಬೆಳ್ಳಿಯ ಎರಡು ಬೃಹತ್ ಕಾಲುದೀಪಗಳನ್ನು ಅಯೋಧ್ಯೆಗೆ ಅರ್ಪಿಸಿದ್ದು, ಪೇಜಾವರ ಮಠದ ಶಿಷ್ಯರಾಗಿರುವ ದಂಪತಿ ರಾಮಸೇವೆ ಮಾಡುವ ಸಂಕಲ್ಪ ಮಾಡಿದ್ದು, ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳ ಮೂಲಕ ಆ ದೀಪಗಳನ್ನು ಅರ್ಪಿಸಿದ್ದಾರೆ ಎನ್ನಲಾಗಿದೆ.

ಎರಡು ದೀಪಗಳು ತಲಾ ಮೂರೂವರೆ ಅಡಿ ಎತ್ತರವಿದ್ದು, ತಲಾ 13.5 ಕೆ.ಜಿ.ತೂಕವಿವೆ. ಹೀಗೆ ಕೊಡಲ್ಪಟ್ಟ ಹೊಸ ದೀಪಗಳನ್ನು ರಾಮಮಂದಿರದ ಗರ್ಭಗುಡಿಯ ಮುಂಭಾಗದಲ್ಲಿ ಪೇಜಾವರ ಸ್ವಾಮೀಜಿ ಬೆಳಗಿದರು.

Related posts

ದುರದೃಷ್ಟವಶಾತ್ ನಾನೂ ಆ ವಿಡಿಯೋ ನೋಡಿದೆ ಎಂದ ಹರ್ಷಿಕಾ ಪೂಣಚ್ಚ ..! ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ನಟಿ ಹೇಳಿದ್ದೇನು..?

ವಿಜಯ್ ಮಲ್ಯ ಮತ್ತು ನೀರವ್ ಮೋದಿಯ 14,131 ಕೋಟಿ ಆಸ್ತಿ ಬ್ಯಾಂಕ್‌ ಗಳಿಗೆ ಹಸ್ತಾಂತರ, 22,280 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಏ.14 ರಂದು ಮೋದಿ ಮಂಗಳೂರಿಗೆ, ಮೋದಿ ಕರ್ನಾಟಕ ಪ್ರವಾಸದಲ್ಲಿ ಮಹತ್ವದ ಬದಲಾವಣೆ