ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಕನ್ನಡ ನಟ-ನಟಿಯರಿಗೂ ಆಹ್ವಾನ ಸಿಕ್ಕಿದೆಯಾ? ಯಾರೆಲ್ಲ ಭಾಗವಹಿಸಲಿದ್ದಾರೆ? ಇಲ್ಲಿದೆ ಲಿಸ್ಟ್

ನ್ಯೂಸ್ ನಾಟೌಟ್: ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ತೀವ್ರ ವೇಗ ಪಡೆದಿದ್ದು, ಇದೇ ಜನವರಿ 22ರಂದು ಗರ್ಭಗುಡಿಯಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ 4 ಸಾವಿರ ಸಾಧುಗಳು ಹಾಜರಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ ಎಂಬ ಮಾಹಿತಿಗಳು ದೊರೆತಿವೆ. ಬಹಳ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮುಂದಾಗಿದ್ದು, ಪ್ರಧಾನಿ ಪೂಜೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಆದರೆ ಅದಕ್ಕೂ ಒಂದು ವಾರ ಮುನ್ನ ಪ್ರಾಣ ಪ್ರತಿಷ್ಟಾಪನೆಯ ವಿಧಿ ವಿಧಾನಗಳು ಆರಂಭವಾಗಲಿದೆ ಎನ್ನಲಾಗಿದೆ.

ವಾರಾಣಸಿಯ ವೈದಿಕ ಸಂಪ್ರದಾಯದ ವಿದ್ವಾಂಸ, 86 ವರ್ಷದ ಹಿರಿಯ ಪಂಡಿತ್ ಲಕ್ಷ್ಮೀಕಾಂತ ಮಥುರನಾಥ ದೀಕ್ಷಿತ್ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಟಾಪನೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರಿಗೂ ಆಹ್ವಾನ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್, ಮಾಲಿವುಡ್ ತಾರೆಯರು ಈ ಶುಭಕಾರ್ಯಕ್ಕೆ ಸಾಕ್ಷಿ ಆಗಲಿದ್ದಾರೆ.

ಕನ್ನಡ ನಟ, ನಿರ್ದೇಶಕ ರಿಷಬ್ ಶೆಟ್ಟಿ, ತಮಿಳು ನಟರಾದ ರಜನಿಕಾಂತ್, ಧನುಷ್, ತೆಲುಗು ನಟ ಚಿರಂಜೀವಿ, ಮಲಯಾಳಂ ನಟ ಮೋಹನ್ ಲಾಲ್‌ಗೆ ಈಗಾಗಲೇ ಆಹ್ವಾನ ಸಿಕ್ಕಿದೆ ಎನ್ನಲಾಗುತ್ತಿದ್ದು, ಬಾಲಿವುಡ್‌ನಿಂದ ಅಕ್ಷಯ್‌ ಕುಮಾರ್, ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್, ನಿರ್ದೇಶಕರಾದ ರಾಜ್‌ಕುಮಾರ್ ಹಿರಾನಿ, ರೋಹಿತ್ ಶೆಟ್ಟಿ ಈ ಲಿಸ್ಟ್‌ನಲ್ಲಿ ಇದ್ದಾರೆ. ಇನ್ನು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾಗೂ ಆಹ್ವಾನ ಸಿಕ್ಕಿದ್ದು, ಚಿತ್ರರಂಗದಿಂದ ಮತ್ತಷ್ಟು ತಾರೆಯರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ ಎಂದು ವರದಿ ತಿಳಿಸಿದೆ.

Related posts

ನಟ ರಕ್ಷಿತ್ ಶೆಟ್ಟಿ ಜೊತೆ ಹೊಸ ಹುಡುಗಿಯ ಫೋಟೋಸ್ ವೈರಲ್‌,ಯಾರು ಈ ಕ್ಯೂಟ್ ನಟಿ ?

ಕಳೆಂಜ: ಅಕ್ರಮ ಮದ್ಯ ಸಂಗ್ರಹ ಮಾಡಿದ ಆರೋಪ, ಮಾಲೀಕನಿಗೆ ಬೆಳ್ತಂಗಡಿ ನ್ಯಾಯಾಲಯದಿಂದ ದೋಷಮುಕ್ತ ತೀರ್ಪು

ಮೂತ್ರ ವಿಸರ್ಜನೆ ಪ್ರಕರಣಕ್ಕೆ ರೋಚಕ ತಿರುವು..! ಸಂತ್ರಸ್ತನ ಕಾಲು ತೊಳೆದು ಕ್ಷಮೆ ಕೋರಿದ ಸಿಎಂ..! ಇಲ್ಲಿದೆ ವೈರಲ್ ವಿಡಿಯೋ