ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ರಾಮಮಂದಿರ ಕರಸೇವಕ ಜೈಲಿನಿಂದ ಬಿಡುಗಡೆ..! ಶ್ರೀಕಾಂತ್ ಪೂಜಾರಿಗೆ ಕೋರ್ಟ್ ವಿಧಿಸಿದ ಷರತ್ತುಗಳೇನು..?

ನ್ಯೂಸ್ ನಾಟೌಟ್: ಜಾಮೀನು ಮಂಜೂರಾದ ಹಿನ್ನೆಲೆ ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿಯನ್ನು ಇಂದು(ಜ.6) ಹುಬ್ಬಳ್ಳಿ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.

ರಾಮಜನ್ಮಭೂಮಿ ಹೋರಾಟ ಸಂಬಂಧ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಭಾಗಿಯಾಗಿದ್ದ ಪ್ರಕರಣ ಸಂಬಂಧ ಕರಸೇವಕ ಶ್ರೀಕಾಂತ ಪೂಜಾರಿಗೆ ನಿನ್ನೆ ಹುಬ್ಬಳ್ಳಿಯ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ ಎನ್ನಲಾಗಿದೆ.

ಇಬ್ಬರ ಶ್ಯೂರಿಟಿ, ಒಂದು ಲಕ್ಷ ರೂಪಾಯಿ ಮೌಲ್ಯದ 2 ಬಾಂಡ್, ಕೋರ್ಟ್ ವ್ಯಾಪ್ತಿ ಬಿಟ್ಟುಹೋಗಬಾರದು, ವಿಚಾರಣೆಗೆ ಹಾಜರಾಗಬೇಕು, ಸಾಕ್ಷ್ಯ ನಾಶ ಮಾಡಬಾರದು ಎಂದು ಷರತ್ತು ವಿಧಿಸಿ 1 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಿನ್ನೆ(ಜ.5) ತೀರ್ಪು ಪ್ರಕಟಿಸಿತ್ತು.

ರಾಮಮಂದಿರ ಹೋರಾಟ ಸಂಬಂಧ 1992 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಾಟೆಯಲ್ಲಿ ಶ್ರೀಕಾಂತ್‌ ಪೂಜಾರಿ ಭಾಗಿಯಾಗಿದ್ದರು. ಆದರೆ ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯ ದಿನ ಸಮೀಪ ಬರುತ್ತಿದ್ದಂತೆ ಶ್ರೀಕಾಂತ್ ಪೂಜಾರಿಯನ್ನು ಹುಬ್ಬಳ್ಳಿಯ ಶಹರ ಠಾಣಾ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಇದು ದೇಶದಾದ್ಯಂತ ಸದ್ದು ಮಾಡಿದ್ದು, ರಾಜ್ಯ ವಿಪಕ್ಷ ಬಿಜೆಪಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿತ್ತು.

Related posts

ಕೂಲಿ ಕಾರ್ಮಿಕರು ತೆರಳುತ್ತಿದ್ದ ಟ್ರ್ಯಾಕ್ಟರ್ ಗೆ ಸರ್ಕಾರಿ ಬಸ್ ಡಿಕ್ಕಿ..! ನವವಿವಾಹಿತೆ ಸಾವು, 18 ಮಂದಿಗೆ ಗಾಯ..!

ಅಪ್ಪನ ಜತೆ ಮಲಗಿದ್ದ 1 ವರ್ಷದ ಮಗುವನ್ನು ಎಳೆದೊಯ್ದ ಬೀದಿ ನಾಯಿಗಳ ಗುಂಪು,ಹೊರಗೋಡಿ ನೋಡಿದಾಗ ಶವವಾಗಿ ಬಿದ್ದಿತ್ತು ಪುಟ್ಟ ಕಂದಮ್ಮ..!

ಆಂಧ್ರಪ್ರದೇಶದಲ್ಲಿ ಲಾರಿಗಳ ನಡುವೆ ಭೀಕರ ಅಪಘಾತ, ಉಚ್ಚಿಲ ಭಾಸ್ಕರನಗರದ ನಿವಾಸಿ ಸಾವು