ಕರಾವಳಿ

ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ,ಕರಾವಳಿಯಾದ್ಯಂತ ರಾಮನಾಮ ಜಪದಲ್ಲಿ ನಿರತರಾದ ರಾಮಭಕ್ತರು..!

223

ನ್ಯೂಸ್‌ ನಾಟೌಟ್‌ : ಇಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಇಡೀ ದೇಶದಲ್ಲಿಯೇ ಸಂಭ್ರಮ ಕಳೆಗಟ್ಟಿದೆ.ರಾಮಭಕ್ತರು ವಿಶೇಷವಾಗಿ ರಾಮನಾಮ ಸ್ಮರಣೆಯಲ್ಲಿ ತೊಡಗಿದ್ದಾರೆ.ಈ ಪ್ರಯುಕ್ತ ಕರಾವಳಿಯಾದ್ಯಂತ ರಾಮನಾಮ ಜಪದಲ್ಲಿ ಭಕ್ತರು ನಿರತರಾಗಿದ್ದಾರೆ.

ಇನ್ನು ಕರಾವಳಿಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.ಅಂತೆಯೇ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ರಾಮಮಂದಿರಗಳಲ್ಲಿ ಭಜನೆ‌, ಪೂಜೆ ಅದ್ದೂರಿಯಿಂದ ನಡೆಯುತ್ತಿದ್ದು,ಎಲ್ಲಾ ರಾಮ-ಹನುಮಂತನ ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆ‌ ನೆರವೇರುತ್ತಿದೆ.

See also  ಪುತ್ತೂರಿನಲ್ಲಿ ಕಂಡಕ್ಟರ್ ಒಬ್ಬರು ಅಮಾನವೀಯವಾಗಿ ನಡೆದುಕೊಂಡ ಬಗ್ಗೆ ಸ್ಪಷ್ಟನೆ ನೀಡಿದ KSRTC..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget