ಕರಾವಳಿಕ್ರೈಂವೈರಲ್ ನ್ಯೂಸ್

ರಾಮ ದಶರಥ ಮಹಾರಾಜನಿಗೆ ಹುಟ್ಟಿಲ್ಲ, ಪುರೋಹಿತನಿಗೆ ಹುಟ್ಟಿದ್ದು..! ಮತ್ತೆ ನಾಲಗೆ ಹರಿಬಿಟ್ಟ ಪ್ರೊ.ಭಗವಾನ್..!

256

ನ್ಯೂಸ್ ನಾಟೌಟ್: ರಾಮ ದಶರಥ ಮಹಾರಾಜರಿಗೆ ಹುಟ್ಟಿಲ್ಲ, ಪುರೋಹಿತನೊಬ್ಬನಿಗೆ ಹುಟ್ಟಿರುವುದು. ಮಹಾಭಾರತದ ಪಾಂಡವ ಸಹೋದರರು ಹುಟ್ಟಿದ್ದು ದೇವತೆಗಳಿಂದ. ಈ ಮಾತಿಗೆ ನನ್ನ ಬಳಿ ಪುರಾವೆಗಳಿವೆ ಎಂದು ಸಾಹಿತಿ, ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯಿಂದ ಭಾನುವಾರ(ಜೂ.೯) ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ ಹಾಗೂ ಪ್ರೊ.ಬಿ.ಕೃಷ್ಣಪ್ಪ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ. ರಾಮಾಯಣದ ರಾಮ ದಶರಥ ಮಹಾರಾಜರ ಮಗ ಎಂಬುದಷ್ಟೆ ತಿಳಿದ ವಿಷಯವಾದರೂ ರಾಮ ದಶರಥ ಮಹಾರಾಜರಿಂದ ಹುಟ್ಟಿಲ್ಲ, ಬದಲಾಗಿ ಪುರೋಹಿತನೊಬ್ಬನಿಂದ ಹುಟ್ಟಿದನು. ಅದೇ ರೀತಿ ಮಹಾಭಾರತದ ವಿಷಯಕ್ಕೆ ಬಂದರೆ, ಶಾಪಗ್ರಸ್ಥ ರಾಜ ಪಾಂಡು ಐವರು ಪಾಂಡವರ ತಂದೆ ಎಂದು ಹೇಳಲಾಗುತ್ತಿದ್ದರೂ ಪಾಂಡವರು ಹುಟ್ಟಿದ್ದು ಮಾತ್ರ ದೇವತೆಗಳಿಂದ ಎಂದು ಮಹಾಭಾರತದಲ್ಲೇ ಇದೆ’ ಎಂದಿದ್ದಾರೆ.

ಪುರಾಣಗಳನ್ನು ಅಭ್ಯಾಸ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಪುರಾಣಗಳು ಹಾಗೂ ಮನುಸ್ಮೃತಿಯಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದೆಲ್ಲ ಜಾತಿ, ಜನಾಂಗದವರನ್ನು ಶೂದ್ರರೆಂದು ಕರೆದಿವೆ. ಶೂದ್ರರೆಲ್ಲಾ ಬ್ರಾಹ್ಮಣರ ಸೇವಕರು ಎಂಬುದನ್ನು ಸಾರಿ ಹೇಳಿದೆ ಎಂದಿದ್ದಾರೆ. ಮನುಷ್ಯರನ್ನು ಮನುಷ್ಯರಂತೆ ಕಾಣದ ಇಂತಹ ಪುರಾಣ, ಮನುಸ್ಮೃತಿಯಿಂದ ದೇಶದ ಬಹುಸಂಖ್ಯಾತರಿಗೆ ಏನೂ ಪ್ರಯೋಜನವಿಲ್ಲ ಎಂದು ಹೇಳುವ ಮೂಲಕ ಸಾಹಿತಿ ಭಗವಾನ್ ಮತ್ತೆ ವಿವಾದದಲ್ಲಿ ಸಿಲುಕಿದ್ದಾರೆ.

Click 👇

https://newsnotout.com/2024/06/bus-pm-oath-kannada-news-jammu-and-kashmir
https://newsnotout.com/2024/06/yuvarajkumar-divorce-case-in-rajkumar-family
See also  ಕೆ.ಎಸ್.ಆರ್.ಟಿ.ಸಿ(KSRTC) ಯಿಂದ ಊಟ, ತಿಂಡಿ ಸಹಿತ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget