Latestಕ್ರೀಡೆ/ಸಿನಿಮಾಕ್ರೈಂವಿಡಿಯೋವೈರಲ್ ನ್ಯೂಸ್ಸಿನಿಮಾ

ರಾಮ್ ಚರಣ್ ನಿರ್ಮಾಣದ ಸಿನಿಮಾ ಸೆಟ್ ​ನಲ್ಲಿ ಜಲ ಅವಘಡ..! ಹಲವರಿಗೆ ಗಾಯ, ವಿಡಿಯೋ ವೈರಲ್

881

ನ್ಯೂಸ್ ನಾಟೌಟ್: ತೆಲುಗಿನ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ‘ದಿ ಇಂಡಿಯನ್ ಹೌಸ್’ ಸಿನಿಮಾ ಸೆಟ್ ​ನಲ್ಲಿ ಅವಘಡ ಸಂಭವಿಸಿದೆ. ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡ ಹೊರತಾಗಿಯೂ ಈ ಅವಘಡ ಉಂಟಾಗಿದೆ ಎಂದು ಹೇಳಲಾಗಿದೆ. ಈ ಚಿತ್ರದ ನಿರ್ಮಾಣದಲ್ಲಿ ರಾಮ್ ಚರಣ್ ಕೂಡ ಭಾಗಿ ಆಗಿದ್ದಾರೆ ಎನ್ನಲಾಗಿದೆ. ಈ ಘಟನೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶಂಶಾಬಾದ್ ​ನಲ್ಲಿ ‘ದಿ ಇಂಡಿಯನ್ ಹೌಸ್’ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಶೂಟ್​ಗಾಗಿ ಬೃಹತ್ ನೀರಿನ ಟ್ಯಾಂಕರ್ ನಿರ್ಮಾಣ ಮಾಡಲಾಗಿತ್ತು. ಈ ಟ್ಯಾಂಕರ್ ಏಕಾಏಕಿ ಒಡೆದಿದೆ. ನೀರನ ಒತ್ತಡದಿಂದ ಟ್ಯಾಂಕರ್ ಒಡೆದಿರಬಹುದು ಎಂದು ಊಹಿಸಲಾಗಿದೆ. ಘಟನೆಯಲ್ಲಿ ಸಹಾಯಕ ಕ್ಯಾಮೆರಾಮನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಟ್ಯಾಂಕ್ ​ನಿಂದ ನೀರು ಏಕಾಏಕಿ ಬಂದಿದ್ದರಿಂದ ಸಾಕಷ್ಟು ತೊಂದರೆಗಳು ಉಂಟಾದವು. ಸೆಟ್ ಪೂರ್ತಿ ನಾಶವಾಗಿದೆ. ಸಹಾಯಕ ಕ್ಯಾಮೆರಾಮೆನ್​ ಜೊತೆಗೆ ಇನ್ನೂ ಕೆಲವರು ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ.

 

View this post on Instagram

 

A post shared by 123telugu (@123teluguofficial)

‘ದಿ ಇಂಡಿಯನ್ ಹೌಸ್’ ಚಿತ್ರದ ಕಥೆ ಸ್ವಾತಂತ್ರ್ಯಪೂರ್ವ ವಿಚಾರವನ್ನು ಹೊಂದಿದೆ. ಲಂಡನ್ ​ನಲ್ಲಿ ಇದ್ದ ಇಂಡಿಯನ್ ಹೌಸ್​ನಲ್ಲಿ ನಡೆಯೋ ಲವ್​ ಸ್ಟೋರಿಯ ಬಗ್ಗೆಯೂ ಚಿತ್ರದಲ್ಲಿ ಹೇಳಲಾಗಿದೆ. ಈ ಸಿನಿಮಾಗೆ ರಾಮ್ ವಂಶಿ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಅಭಿಷೇಕ್ ಅಗರ್ ​ವಾಲ್ ಹಾಗೂ ತೇಜ್ ನಾರಾಯಣ್ ಅಗರ್ ​ವಾಲ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಣದಲ್ಲಿ ರಾಮ್ ಚರಣ್ ಕೂಡ ಕೈ ಜೋಡಿಸಿದ್ದಾರೆ ಎನ್ನಲಾಗಿದೆ.

See also  ಪೆರಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ..! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget