ಕರಾವಳಿಕ್ರೈಂರಾಜಕೀಯರಾಜ್ಯ

ಬೆಳ್ತಂಗಡಿ: ಬಾಂಗ್ಲಾ ಪ್ರಧಾನಿಯಂತೆ ಮೋದಿ ಹಾಸಿಗೆ, ದಿಂಬು ಹಿಡಿದುಕೊಂಡು ಓಡಬೇಕಾಗುತ್ತದೆ ಎಂದ ಕಾಂಗ್ರೆಸ್ ಮುಖಂಡ..! ಮುಡಾ ಹಗರಣ ಸಂಬಂಧ ಪ್ರತಿಭಟನೆಯ ವೇಳೆ ರಕ್ಷಿತ್ ಶಿವರಾಮ್ ವಿವಾದ..!

242

ನ್ಯೂಸ್ ನಾಟೌಟ್ : ಮುಡಾ ಹಗರಣಕ್ಕೆ ಸಂಬಂಧಿಸಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದನ್ನು ವಿರೋಧಿಸಿ, ಸಿಎಂ ಪರ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡ ವಿವಾದಾತ್ಮಕ ಹೇಳಿಕೆ ನೀಡಿ ಜನಾಕ್ರೋಶಕ್ಕೆ ಕಾರಣವಾಗಿದ್ದಾರೆ.

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮುಖಂಡ ಐವಾನ್ ಡಿಸೋಜಾ, ರಾಜ್ಯಪಾಲರನ್ನು ವಾಪಾಸ್ ಕರೆಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ರಕ್ಷಿತ್ ಶಿವರಾಂ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಾಂಗ್ಲಾ ಹಿಂಸಾಚಾರದ ಎಚ್ಚರಿಕೆ ನೀಡಿದ್ದಾರೆ. ಬಾಂಗ್ಲಾ ದೇಶದಲ್ಲಿ ಅಲ್ಲಿನ ಪ್ರಧಾನಿ ಮನೆಯನ್ನು ಯಾವ ರೀತಿ ಮಾಡಲಾಯಿತೋ ಅದೇ ಪರಿಸ್ಥಿತಿ ನರೇಂದ್ರ ಮೋದಿಗೆ ಬರಲಿದೆ. ಹಾಸಿಗೆ, ದಿಂಬು ಹಿಡಿದುಕೊಂಡು ಓಡಬೇಕಾದ ಸ್ಥಿತಿ ಬರುತ್ತದೆ ಎಂದು ಎಚ್ಚರಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.

Click

https://newsnotout.com/2024/08/indira-gandhi-mamatha-banarji-kannada-news-protest-insta-video/
https://newsnotout.com/2024/08/mangaluru-mooda-case-cm-siddaramayya-issue-bus-damage/
https://newsnotout.com/2024/08/viral-video-village-west-bengal-elephant-kannada-news/
https://newsnotout.com/2024/08/press-meet-heart-attack-kannada-news-viral-news-kuruba/
https://newsnotout.com/2024/08/benngaluru-issue-dance-choreographer-arrest-kannada-news/
See also  ಸೋಮವಾರಪೇಟೆ: ಯುವತಿ ಮೇಲೆ ಮೂವರಿಂದ ಅತ್ಯಾಚಾರ ಯತ್ನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget