Latestವೈರಲ್ ನ್ಯೂಸ್ಸಿನಿಮಾ

ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ನಟ ಕಮಲ್ ಹಾಸನ್..! ಇದೇ ಜೂನ್ 19ರಂದು ಚುನಾವಣೆ

624

ನ್ಯೂಸ್ ನಾಟೌಟ್: ನಟ, ರಾಜಕಾರಣಿ ಕಮಲ್ ಹಾಸನ್ ಕರ್ನಾಟಕದಲ್ಲಿ ಭಾಷಾ ಗದ್ದಲವೆಬ್ಬಿಸಿ, ಥಗ್ ಲೈಫ್ ಸಿನಿಮಾದಲ್ಲಿ ಹಿನ್ನಡೆಯಾದ ಬೆನ್ನಲ್ಲೇ ರಾಜ್ಯಸಭೆಯತ್ತ ಹೆಜ್ಜೆ ಇಟ್ಟಿದ್ದಾರೆ. ಡಿಎಂಕೆ ಬೆಂಬಲದೊಂದಿಗೆ ರಾಜ್ಯಸಭೆಗೆ ಹೋಗಲು ನಿರ್ಧರಿಸಿದ್ದು, ಇಂದು(ಜೂ.6) ನಾಮಪತ್ರ ಸಲ್ಲಿಸಿದ್ದಾರೆ.

ತಮಿಳುನಾಡಿನ 6 ರಾಜ್ಯಸಭಾ ಸ್ಥಾನಗಳಿಗೆ ಇದೇ ಜೂನ್ 19ರಂದು ಚುನಾವಣೆ ನಡೆಯಲಿದ್ದು, ಮುಂದಿನ ಸೋಮವಾರದವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. 2026 ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಒಂದು ಕಾರ್ಯತಂತ್ರದ ಹೆಜ್ಜೆಯಾಗಿ ಇದನ್ನು ಕಾಣಬಹುದು. ಕಮಲ್ ಹಾಸನ್ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಲಿದ್ದಾರೆ. ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ತನ್ನ ನಾಲ್ಕು ರಾಜ್ಯಸಭಾ ಸ್ಥಾನಗಳಲ್ಲಿ ಒಂದನ್ನು ಹಾಸನ್ ನ ಮಕ್ಕಳ್ ನೀಧಿ ಮಯ್ಯಂ (ಎಂಎನ್ಎಂ) ಪಕ್ಷಕ್ಕೆ ನೀಡಲು ನಿರ್ಧರಿಸಿದೆ. ತಮ್ಮ ನಾಮಪತ್ರಗಳನ್ನು ವಿಧಾನಸಭೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗೆ ಸಲ್ಲಿಸಿದರು.

ಕಮಲ್ ಹಾಸನ್ 2018 ರಲ್ಲಿ ರಾಜಕೀಯ ಪ್ರವೇಶಿಸಿದರು, ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್, ಕಮಲ್ ಹಾಸನ್ ಪಕ್ಷಕ್ಕೆ ಒಂದು ಸ್ಥಾನವನ್ನು ನೀಡಲು ನಿರ್ಧರಿಸಿದೆ ಎಂದು ಹೇಳಿದ್ದರು.2024ರ ಲೋಕಸಭಾ ಚುನಾವಣೆಗೆ ಮೊದಲು ಎರಡೂ ಪಕ್ಷಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಜೂನ್ 9 ರವರೆಗೆ ನಡೆಯಲಿದೆ. ಮರುದಿನ ಪರಿಶೀಲನೆ ನಡೆಯಲಿದೆ. ನಂತರ ಜೂನ್ 19 ರಂದು ಮತದಾನ ನಡೆದು ಅದೇ ದಿನ ಸಂಜೆ ಫಲಿತಾಂಶ ಪ್ರಕಟವಾಗಲಿದೆ.

ನಟ ವಿಶಾಲ್ ಬಡ್ಡಿ ಸಮೇತ 27.68 ಕೋಟಿ ಹಣ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ..! ನೀಡದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ..!

ಬೆಂಗಳೂರಿಗೆ ಬರುತ್ತಿದ್ದ ವೇಳೆ ನಿಂತಿದ್ದ ಟ್ರಕ್‌ ಗೆ ಗುದ್ದಿದ ಖ್ಯಾತ ಮಲಯಾಳಂ ನಟನ ಕಾರು..! ನಟನ ತಂದೆ ಸ್ಥಳದಲ್ಲೇ ಸಾವು..!

See also  Whatsappನಲ್ಲಿ ಸ್ಟೇಟಸ್ ಹಾಕೋ ಅಭ್ಯಾಸ ನಿಮಗಿದೆಯಾ?ಹಾಗಾದರೆ ಈ ಗುಡ್‌ ನ್ಯೂಸ್‌ ಬಗ್ಗೆ ಗೊತ್ತಿರ್ಲೇಬೇಕು..!!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget