ಕೊಡಗು

ಊರುಬೈಲಿನ ರಾಜೇಶ್ ನಿಡಿಂಜಿ ನಿಧನ

ನ್ಯೂಸ್ ನಾಟೌಟ್: ಅತ್ಯುತ್ತಮ ಕ್ರೀಡಾಪಟು ಆಗಿ ಗುರುತಿಸಿಕೊಂಡಿದ್ದ ಚೆಂಬು ಗ್ರಾಮದ ಊರುಬೈಲಿನ ರಾಜೇಶ್ ನಿಡಿಂಜಿ ಶನಿವಾರ ನಿಧನರಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರಿಗೆ 34 ವರ್ಷವಾಗಿತ್ತು.

ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಹೈಸ್ಕೂಲ್ ಹಾಗೂ ಪಿಯುಸಿ ಶಿಕ್ಷಣವನ್ನು ಪೂರೈಸಿದ್ದ ರಾಜೇಶ್ ನಿಡಿಂಜಿ ಬಳಿಕ ಊರುಬೈಲಿನಲ್ಲಿದ್ದ ತನ್ನ ಜಮೀನಿನಲ್ಲಿ ಕೃಷಿಕರಾಗಿ ದುಡಿಯುತ್ತಿದ್ದರು. ಕಾಲೇಜು ದಿನಗಳಲ್ಲಿ ಕಬಡ್ಡಿ ಹಾಗೂ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ರಾಜೇಶ್ ಅಪಾರ ಮಿತ್ರ ವರ್ಗದ ಪ್ರೀತಿಗೆ ಪಾತ್ರರಾಗಿದ್ದರು. ಮೃತರು ಪತ್ನಿ ದಿವ್ಯ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Related posts

Madikeri:ಕರಿಕೆ ಪ್ರಾ.ಕೃ.ಸ.ಸಂ. ಚುನಾವಣೆ , ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಮಡಿಕೇರಿ: ಮದ್ಯದ ನಶೆಯಲ್ಲಿ ಪತ್ನಿಯ ಕತ್ತಿಗೆ ಮಚ್ಚು ಬೀಸಿದ ಪತಿ..!

ನಾಳೆ (ಜು.11) ಕೊಡಗಿನ ಅಂಗನವಾಡಿ, ಶಾಲೆಗೆ ಮಾತ್ರ ರಜೆ